alex Certify CBR650R ಬಿಡುಗಡೆ ಮಾಡಿದ ಹೋಂಡಾ, ಹುಬ್ಬೇರಿಸುವಂತಿದೆ ಇದರ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBR650R ಬಿಡುಗಡೆ ಮಾಡಿದ ಹೋಂಡಾ, ಹುಬ್ಬೇರಿಸುವಂತಿದೆ ಇದರ ಬೆಲೆ…!


ತನ್ನ ಪ್ರೀಮಿಯಂ ಬೈಕ್‌ಗಳ ಬಿಗ್‌ವಿಂಗ್ ಶೋರೂಂ ಮೂಲಕ CBR300R ಬೈಕುಗಳ ಮಾರಾಟ ಆರಂಭಿಸಿರುವ ಹೋಂಡಾ, ಇದರ ಬೆನ್ನಿಗೇ 2022 ಹೋಂಡಾ CBR650R ಮಾಡೆಲ್ ‌ಅನ್ನೂ ಸಹ ಲಾಂಚ್‌ ಮಾಡಿದೆ.

ಮಧ್ಯಮಗಾತ್ರದ ಸ್ಪೋರ್ಟ್ ವರ್ಗದ ಗ್ರಾಹಕರಿಗೆ ಈ ಬೈಕ್ ಅಭಿವೃದ್ಧಿ ಮಾಡಲಾಗಿದೆ. ಇದೇ ವೇಳೆ ತನ್ನ ಹೊಸ ಬೈಕ್‌ಗಳ ಲಾಂಚ್‌ ಆದ ಬೆನ್ನಿಗೇ ಅವುಗಳಿಗೆ ಬುಕಿಂಗ್ ಗವಾಕ್ಷಿಯನ್ನೂ ಹೋಂಡಾ ತೆರೆದಿದೆ.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ವಿಶೇಷತೆ ಏನು ಗೊತ್ತಾ…?

2022 CBR650R ಬೈಕ್‌ನಲ್ಲಿ ಕಿತ್ತಳೆ ಬಣ್ಣದ ಹೊಸ ಹೈಲೈಟ್‌ಗಳು ಇದ್ದು, ಸ್ಪೋರ್ಟಿ ಗ್ರಾಫಿಕ್ಸ್‌ಗಳಿಂದ ಕಂಗೊಳಿಸುತ್ತಿದೆ. ಮೇಲ್ಮುಖ ಹಾಗೂ ಕೆಳಮುಖದ ಫೇರಿಂಗ್ ‌ಗಳಿಂದ ಬೈಕ್‌ಗೆ ಆಜಾನುಬಾಹುವಿನ ಲುಕ್ ಸಿಕ್ಕಿದೆ.

649ಸಿಸಿ, ಡೊಓಎಚ್‌ಸಿ 16-ವಾಲ್ವ್‌, ನಾಲ್ಕು ಸಿಲಿಂಡರ್‌ ಎಂಜಿನ್ ಹೊಂದಿರುವ CBR650R 12,000 ಆರ್‌ಪಿಎಂನಲ್ಲಿ 64ಕಿವ್ಯಾಗಳಷ್ಟು ಗರಿಷ್ಠ ಶಕ್ತಿ ಉತ್ಪಾದಿಸಬಲ್ಲದು. 8,500 ಆರ್‌ಪಿಎಂನಲ್ಲಿ ಗರಿಷ್ಠ 57.5 ಎನ್‌ಎಂ ಟಾರ್ಕ್‌ ಸಹ ಉತ್ಪಾದನೆ ಮಾಡುತ್ತದೆ ಈ ಬೈಕ್.

9,35,427 ರೂ.ಗಳು (ಎಕ್ಸ್‌ಶೋರೂಂ ಬೆಲೆ, ಗುರುಗ್ರಾಮ) ಬೆಲೆ ಇರುವ ಈ ಬೈಕ್‌ನ ಬುಕಿಂಗ್ ಇಂದಿನಿಂದಲೇ ಆರಂಭಗೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...