alex Certify ಗಮನಿಸಿ; ಬ್ಯಾಂಕ್ ಕಳಿಸುವ ಎಸ್ಎಂಎಸ್ ಬಗ್ಗೆ ಬೇಡ ನಿರ್ಲಕ್ಷ್ಯ: ಬೀಳಲಿದೆ 1 ಸಾವಿರದವರೆಗೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ; ಬ್ಯಾಂಕ್ ಕಳಿಸುವ ಎಸ್ಎಂಎಸ್ ಬಗ್ಗೆ ಬೇಡ ನಿರ್ಲಕ್ಷ್ಯ: ಬೀಳಲಿದೆ 1 ಸಾವಿರದವರೆಗೆ ದಂಡ

ಪಾನ್ ಕಾರ್ಡ್, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ಯಾ? ಇಲ್ಲವಾದ್ರೆ ತಕ್ಷಣ ಪಾನ್-ಆಧಾರ್ ಲಿಂಕ್ ಮಾಡಿ. ಪಾನ್-ಆಧಾರ್ ಲಿಂಕ್ ದಿನಾಂಕವನ್ನು ಇನ್ನು ವಿಸ್ತರಿಸಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ಲಿಂಕ್ ಆಗದೆ ಹೋದಲ್ಲಿ ದಂಡ ವಿಧಿಸಲಾಗುತ್ತದೆ. ಬ್ಯಾಂಕುಗಳು ಪಾನ್- ಆಧಾರ್ ಗೆ ಲಿಂಕ್ ಮಾಡುವ ಬಗ್ಗೆ ಗ್ರಾಹಕರಿಗೆ ಎಸ್ಎಂಎಸ್ ಮತ್ತು ಮೇಲ್ ಕಳುಹಿಸುತ್ತಿವೆ.

ಎಚ್ ಡಿ ಎಫ್ ಸಿ ಸೇರಿದಂತೆ ಅನೇಕ ಬ್ಯಾಂಕ್ ನಿಮಗೆ ಪಾನ್-ಆಧಾರ್‌ಗೆ ಸಂಬಂಧಿಸಿದ ಸಂದೇಶ ಅಥವಾ ಇಮೇಲ್ ಕಳುಹಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಕೇಂದ್ರ ನೇರ ತೆರಿಗೆ ಮಂಡಳಿ ಜೂನ್ 30, 2021ರವರೆಗೆ ಅವಕಾಶ ನೀಡಿದೆ. ಮತ್ತೆ ಇದರ ವಿಸ್ತರಣೆ ಸಾಧ್ಯವಿಲ್ಲ ಎನ್ನಲಾಗಿದೆ. ಆಧಾರ್-ಪಾನ್ ಲಿಂಕ್ ಆಗದೆ ಹೋದಲ್ಲಿ  ಭಾರಿ ದಂಡ ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ.

ಜೂನ್ 30, 2021 ರೊಳಗೆ ಪಾನ್-ಆಧಾರ್ ಲಿಂಕ್ ಮಾಡದಿದ್ದರೆ, 1 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಹಣಕಾಸು ಮಸೂದೆಯ ಮೂಲಕ ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ಬದಲಾವಣೆಗಳನ್ನು ಮಾಡಿ, ದಂಡ ವಿಧಿಸಲು ಸರ್ಕಾರ ಅವಕಾಶ ನೀಡಿದೆ. ಆದಾಯ ತೆರಿಗೆ ವೆಬ್‌ಸೈಟ್ ಮೂಲಕ, ಪಾನ್-ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಎಸ್ಎಂಎಸ್ ಮೂಲಕವೂ ಇದನ್ನು ತಿಳಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...