alex Certify “ಹೀಗಿದೆ 2020”: ವೈರಲ್ ವಿಡಿಯೋ ಶೇ‌ರ್‌ ಮಾಡಿದ ಉದ್ಯಮಿ ಗೋಯೆಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

“ಹೀಗಿದೆ 2020”: ವೈರಲ್ ವಿಡಿಯೋ ಶೇ‌ರ್‌ ಮಾಡಿದ ಉದ್ಯಮಿ ಗೋಯೆಂಕಾ

ಭಾರೀ ಅನಿಶ್ಚಿತತೆಗಳ ವರ್ಷವಾಗಿರುವ 2020ರಲ್ಲಿ ಜಾಗತಿಕ ಸಂಕಟದಿಂದ ಮನುಕುಲದ ಲೆಕ್ಕಾಚಾರಗಳೆಲ್ಲಾ ತಲೆಬುಡವಾಗಿಬಿಟ್ಟಿವೆ. ವರ್ಷದ ಕೊನೆಯ ತಿಂಗಳು ಚಾಲ್ತಿಯಲ್ಲಿ ಇರುವಂತೆ, ಈ ವರ್ಷದಲ್ಲಿ ಏನೇನೆಲ್ಲಾ ಅಹಿತಕರ ಘಟನೆಗಳು ಸಂಭವಿಸಿವೆ ಎಂದು ಜನ ಮಾತನಾಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ ವೇಳೆ ಉದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್‌ನ ತಮ್ಮ ಖಾತೆಯೊಂದರಲ್ಲಿ ಫುಟ್ಬಾಲ್‌ ಪಂದ್ಯವೊಂದರ ಭಾರೀ ಅನಿಶ್ಚಿತ ಕ್ಷಣಗಳ ವಿಡಿಯೋ ತುಣುಕೊಂದನ್ನು ಶೇರ್‌ ಮಾಡಿಕೊಂಡಿದ್ದು, ಇಡೀ ವರ್ಷ ಹೇಗೆ ಸಾಗಿದೆ ಎಂಬ ಝಲಕ್ ಕೊಟ್ಟಿದ್ದಾರೆ.

2020ರ ವರ್ಷ ಈ ಪಂದ್ಯದ ಸೀನ್‌ಗಿಂತ ಭಿನ್ನವಾಗೇನೂ ಇರಲಿಲ್ಲ ಎಂದು ಹೇಳುವಂತೆ ಇರುವ ಈ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ಶಾನೇ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...