alex Certify ಗಮನಿಸಿ…! ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯಗೊಳಿಸಿದೆ. 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳು ಬೇರೆ ವಾಣಿಜ್ಯ ಸಂಸ್ಥೆಗಳೊಂದಿಗೆ ನಡೆಸುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ -ಇನ್ವಾಯ್ಸ್ ಸಿದ್ಧಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಈ ಮೊದಲು 500 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ವಹಿವಾಟು ಹೊಂದಿರುವ ಕಂಪನಿಗಳು 100 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ವಹಿವಾಟು ಇರುವ ಕಂಪನಿ, ಸಂಸ್ಥೆಗಳೊಂದಿಗೆ ನಡೆಸುವ ವ್ಯವಹಾರಗಳಿಗೆ ಇ -ಇನ್ವಾಯ್ಸ್ ಸಿದ್ಧಪಡಿಸುವ ನಿಯಮ ಕಡ್ಡಾಯವಾಗಿತ್ತು.

ಏಪ್ರಿಲ್ 1 ರಿಂದ 50 ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಂಪನಿಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕಗಳ ಮಂಡಳಿಯಿಂದ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...