alex Certify BIG NEWS: ಸಕ್ಕರೆ ದರ ನಿಯಂತ್ರಣಕ್ಕೆ ಮಹತ್ವದ ಕ್ರಮ: ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ, ಸಕ್ಕರೆ ಪಾಕ ಬಳಕೆ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಕ್ಕರೆ ದರ ನಿಯಂತ್ರಣಕ್ಕೆ ಮಹತ್ವದ ಕ್ರಮ: ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ, ಸಕ್ಕರೆ ಪಾಕ ಬಳಕೆ ನಿಷೇಧ

ನವದೆಹಲಿ: ಈ ತಿಂಗಳು ಪ್ರಾರಂಭವಾದ 2023-24 ಪೂರೈಕೆ ವರ್ಷದಲ್ಲಿ ಎಥೆನಾಲ್ ಉತ್ಪಾದಿಸಲು ‘ಕಬ್ಬಿನ ರಸ ಮತ್ತು ಸಕ್ಕರೆ ಪಾಕ’ ಬಳಕೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ದೇಶೀಯ ಬಳಕೆಗೆ ಸಾಕಷ್ಟು ಸಕ್ಕರೆ ಪೂರೈಕೆಯನ್ನು ನಿರ್ವಹಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

2023-24ರಲ್ಲಿ ಎಥೆನಾಲ್ ಉತ್ಪಾದನೆಗೆ ‘ಬಿ-ಮೊಲಾಸಸ್’ ಬಳಕೆಯನ್ನು ಸರ್ಕಾರ ಅನುಮತಿಸಿತು. ಆಹಾರ ಸಚಿವಾಲಯವು ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರ್‌ ಗಳಿಗೆ ಈ ಬಗ್ಗೆ ತಿಳಿಸಿದೆ. 2023-24 ಪೂರೈಕೆ ವರ್ಷದಲ್ಲಿ(ಡಿಸೆಂಬರ್ – ನವೆಂಬರ್) ಎಥೆನಾಲ್ ಉತ್ಪಾದನೆಗೆ ಕಬ್ಬಿನ ರಸ/ ಸಕ್ಕರೆ ಪಾಕ ಬಳಸದಂತೆ ಸೂಚನೆ ನೀಡಿದೆ. 1966 ರ ಸಕ್ಕರೆ(ನಿಯಂತ್ರಣ) ಆದೇಶದ 4 ಮತ್ತು 5 ನೇ ಷರತ್ತುಗಳ ಅಡಿಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...