alex Certify ಹೊಸ ಸೇವಾ ನಿಯಮ ಹಿಂಪಡೆಯುವಂತೆ ವಾಟ್ಸಾಪ್​ ಗೆ ಕೇಂದ್ರ ಸರ್ಕಾರದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸೇವಾ ನಿಯಮ ಹಿಂಪಡೆಯುವಂತೆ ವಾಟ್ಸಾಪ್​ ಗೆ ಕೇಂದ್ರ ಸರ್ಕಾರದ ಸೂಚನೆ

ವಾಟ್ಸಾಪ್​​ನ ಹೊಸ ಷರತ್ತು ಹಾಗೂ ನಿಯಮಗಳನ್ನ ಹಿಂಪಡೆಯುವಂತೆ ಸೂಚಿಸಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್​ ಸಿಇಓ ವಿಲ್​​ ಕ್ಯಾಥ್​ ಕಾರ್ಟ್​ಗೆ ಪತ್ರ ಬರೆದಿದೆ.

ವಾಟ್ಸಾಪ್ ನ ಬಳಕೆದಾರರ ಮಾಹಿತಿಯನ್ನ ಫೇಸ್​ಬುಕ್​ ಶೇರ್​ ಮಾಡೋದಾಗಿ ಹೇಳಿರುವ ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಹಿಂಪಡೆಯುವಂತೆ ಈ ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

ವಾಟ್ಸಾಪ್​ನ ಹೊಸ ಸೇವಾ ನಿಯಮದಿಂದಾಗಿ ಬಳಕೆದಾರರ ಡೇಟಾ ಗೌಪ್ಯತೆ, ಬಳಕೆದಾರರ ಖಾಸಗಿತನ ಮೌಲ್ಯವನ್ನ ಉಲ್ಲಂಘಿಸುತ್ತಿದೆ. ಭಾರತದಲ್ಲಿ ವಾಟ್ಸಾಪ್​ ಹಾಗೂ ಫೇಸ್​ಬುಕ್​ ಬಳಕೆ ಮಾಡುತ್ತಿರುವ ಬೃಹತ್​ ಜನಸಂಖ್ಯೆಯನ್ನ ಗಮನದಲ್ಲಿಟ್ಟುಕ್ಕೊಂಡು ಈ ಸೇವಾ ನಿಯಮ ಹಿಂಪಡೆಯುವಂತೆ ಐಟಿ ಸಚಿವಾಲಯ ಪತ್ರದಲ್ಲಿ ಉಲ್ಲೇಖಿಸಿದೆ.

ಹೊಸ ಸೇವಾ ನಿಯಮವನ್ನ ವಾಟ್ಸಾಪ್​​ ಪರದೆ ಮೇಲೆ ಪ್ರಕಟಿಸಿದ್ದ ವಾಟ್ಸಾಪ್​ ಹೊಸ ಷರತ್ತನ್ನ ಒಪ್ಪಿಕೊಳ್ಳದೇ ಹೋದಲ್ಲಿ ಫೆಬ್ರವರಿ 8ರಿಂದ ವಾಟ್ಸಾಪ್​​ ಖಾತೆ ಬಂದ್​ ಮಾಡೋದಾಗಿ ಎಚ್ಚರಿಕೆ ನೀಡಿತ್ತು.

ವಾಟ್ಸಾಪ್​​ನ ಈ ಹೊಸ ಸೇವಾ ನಿಯಮ ಒಪ್ಪದ ಅನೇಕರು ಸಿಗ್ನಲ್​​​ ಹಾಗೂ ಟೆಲಿಗ್ರಾಂನಂತಹ ಮೆಸೇಜಿಂಗ್ ಅಪ್ಲಿಕೇಶನ್​​ಗಳ ಮೊರೆ ಹೋಗ್ತಿದ್ದಾರೆ. ಇದಾದ ಬಳಿಕ ಹೊಸ ಸೇವಾನಿಯಮದ ಬಗ್ಗೆ ಟ್ವಿಟರ್​ ಹಾಗೂ ಸ್ಟೇಟಸ್​​ಗಳ ಮೂಲಕ ಸ್ಪಷ್ಟನೆ ನೀಡಿರುವ ವಾಟ್ಸಾಪ್​​ ಮೇ 15ರವರೆಗೆ ಹೊಸ ಸೇವಾ ನಿಯಮ ಜಾರಿಗೆ ತರೋದಿಲ್ಲ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...