alex Certify ʼಗೂಗಲ್​ ಕ್ರೋಮ್​ʼ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೂಗಲ್​ ಕ್ರೋಮ್​ʼ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಗೂಗಲ್​ ಕ್ರೋಮ್​ ಹೊಸ ಅಪ್​ಡೇಟ್​ ತಂದಿದ್ದು ಇದರಿಂದಾಗಿ ವೆಬ್​​ ಬ್ರೌಸರ್​​ನ ಕಾರ್ಯಕ್ಷಮತೆ ವೇಗವಾಗ್ತಿರೋದ್ರ ಜೊತೆಗೆ ಮೊದಲಿನಿಗಿಂತ ಹೆಚ್ಚು ಸುರಕ್ಷಿತವಾಗಿದೆ.

ಈ ವೆಬ್​ ಬ್ರೌಸರ್​ ಹೆಚ್​ಟಿಟಿಪಿ ಬದಲಾಗಿ ಹೆಚ್​​ಟಿಟಿಪಿಎಸ್​​ನ್ನ ಬಳಕೆ ಮಾಡಲಿದ್ದು, ಇದರಿಂದ ಬ್ರೌಸರ್​ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲಿದೆ. ಹೆಚ್​​ಟಿಟಿಪಿ ಅಂದರೆ – Hypertext Transfer Protocol ಆಗಿದ್ದು ಎಸ್​ – ಎಂದರೆ Secure ಎಂದಾಗಿದೆ.

ಎಲ್ಲಾ ಅಡ್ರೆಸ್​ ಬಾರ್​ಗಳು ಸ್ವಯಂಚಾಲಿತವಾಗಿ https: // ಪ್ರೊಟೋಕಾಲ್​ ಪಡೆಯುತ್ತಿದೆ ಎಂದು ಗೂಗಲ್​ ಕ್ರೋಂ ಕ್ರೋಮಿಯಂ ಬ್ಲಾಗ್​ ಪೋಸ್ಟ್ ಮೂಲಕ ಸ್ಪಷ್ಟ ಸಂದೇಶ ನೀಡಿದೆ.

ಬಳಕೆದಾರರು ನಿರ್ದಿಷ್ಟ ವೆಬ್​ಸೈಟ್​ಗೆ ಭೇಟಿ ನೀಡಿದರೆ ಅಡ್ರೆಸ್​ ಬಾರ್​​ನಲ್ಲಿ ಹೆಚ್​ಟಿಟಿಪಿ ಬದಲಾಗಿ ಹೆಚ್​​ಟಿಟಿಪಿಎಸ್​ ಆಯ್ಕೆ ಆಗಲಿದೆ.

ಈ ಸುರಕ್ಷಿತ ಬ್ರೌಸಿಂಗ್​​ನಿಂದ ನಿಮಗೆ ಅಪಾಯಕಾರಿ ಸೈಟ್​ಗಳಿಂದ ಎಚ್ಚರಿಕೆ ಸಿಗಲಿದೆ. ಸ್ಪ್ಯಾಮ್​ ಫೈಲ್​ಗಳನ್ನ ನೀವು ಡೌನ್​ಲೋಡ್​ ಮಾಡುವ ಮುನ್ನ ನಿಮಗೆ ಎಚ್ಚರಿಕೆಯನ್ನ ನೀಡಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...