alex Certify ಆಧಾರ್ ಕಾರ್ಡ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: DL ಸೇರಿ RTO ಕಚೇರಿಯ 18 ಸೇವೆ ಆನ್ಲೈನ್ ನಲ್ಲೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: DL ಸೇರಿ RTO ಕಚೇರಿಯ 18 ಸೇವೆ ಆನ್ಲೈನ್ ನಲ್ಲೇ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆರ್.ಟಿ.ಒ. ಕಚೇರಿ 18 ಸೇವೆಗಳು ಇನ್ನುಮುಂದೆ ಆನ್ಲೈನ್ನಲ್ಲಿ ಲಭ್ಯವಿರುತ್ತವೆ.

ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನವೀಕರಣ, ನೋಂದಣಿ ಮೊದಲಾದ ಕಾರ್ಯಗಳಿಗೆ ಸಾರಿಗೆ ಇಲಾಖೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಆಧಾರ್ ಆಧಾರಿತ 18 ಸೇವೆಗಳಿಗೆ ಕೇಂದ್ರ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಆನ್ಲೈನ್ ನಲ್ಲಿ ಸೇವೆ ನೀಡಲು ಮುಂದಾಗಿದೆ.

ಆರ್ಟಿಓ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರಲು ಆಧಾರ್ ಆಧಾರಿತ 18 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಯಾವುದೇ ಮಧ್ಯವರ್ತಿಯ ನೆರವಿಲ್ಲದೆ ನೇರವಾಗಿ ಸರಳವಾಗಿ ಸೇವೆ ಪಡೆಯಬಹುದಾಗಿದೆ. ವಾಹನ ಕಲಿಕಾ ಪರವಾನಿಗೆ, ಡಿಎಲ್, ನವೀಕರಣ, ನೋಂದಣಿ ವಿಳಾಸ ಬದಲು ಮೊದಲಾದ 18 ಸೇವೆಗಳನ್ನು ಮನೆಯಲ್ಲೇ ಕುಳಿತು ಆಧಾರ್ ಒಟಿಪಿಯೊಂದಿಗೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...