alex Certify ಚಿನ್ನಾಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: 640 ರೂ. ದುಬಾರಿಯಾದ ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: 640 ರೂ. ದುಬಾರಿಯಾದ ಚಿನ್ನ

ನವದೆಹಲಿ: ವಾರದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿಯೂ ದುಬಾರಿಯಾಗಿದೆ. ಈ ವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 640 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 792 ರೂ. ಏರಿಕೆ ಕಂಡಿದೆ.

ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ​​ಅಂದರೆ IBJA ವೆಬ್‌ಸೈಟ್ ಪ್ರಕಾರ, ಈ ವಾರದ ಆರಂಭದಲ್ಲಿ (7-11 ಫೆಬ್ರವರಿ ನಡುವೆ), 999 ಗುಣಮಟ್ಟದ(24 ಕ್ಯಾರೆಟ್) 10 ಪ್ರತಿ ಗ್ರಾಂ ಚಿನ್ನದ ದರ 48,280 ಆಗಿತ್ತು, ಇದು ಶುಕ್ರವಾರದ ವೇಳೆಗೆ 48,920 ರೂ. ಆಗಿದೆ. ಬೆಳ್ಳಿಯ ಬೆಲೆ ಕೆಜಿಗೆ 61,365 ರೂ.ನಿಂದ 62,157 ರೂ.ಗೆ ಏರಿಕೆಯಾಗಿದೆ.

ಈ ಎಲ್ಲಾ ಬೆಲೆಗಳು ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳಿಗೆ ಹೊರತಾಗಿರುತ್ತವೆ.

ಕಳೆದ ಒಂದು ವಾರದಲ್ಲಿ ಬದಲಾದ ಚಿನ್ನದ ದರ

ಜನವರಿ 7, 2022- 10 ಗ್ರಾಂಗೆ 48,280 ರೂ.

ಜನವರಿ 8, 2022- 10 ಗ್ರಾಂಗೆ 48,444 ರೂ.

ಜನವರಿ 9, 2022- 10 ಗ್ರಾಂಗೆ 48,665 ರೂ.

ಜನವರಿ 10, 2022- 10 ಗ್ರಾಂಗೆ 48,901 ರೂ.

ಜನವರಿ 11, 2022- 10 ಗ್ರಾಂಗೆ 48,920 ರೂ.

ಕಳೆದ ಒಂದು ವಾರದಲ್ಲಿ ಬೆಳ್ಳಿ ದರ

ಫೆಬ್ರವರಿ 7, 2022- ಪ್ರತಿ ಕೆಜಿಗೆ 61,365 ರೂ.

ಫೆಬ್ರವರಿ 8, 2022- ಪ್ರತಿ ಕೆಜಿಗೆ 61,618 ರೂ.

ಫೆಬ್ರವರಿ 9, 2022- ಪ್ರತಿ ಕೆಜಿಗೆ 62,387 ರೂ.

ಫೆಬ್ರವರಿ 10, 2022- ಪ್ರತಿ ಕೆಜಿಗೆ 62,825 ರೂ.

ಫೆಬ್ರವರಿ 11, 2022- ಪ್ರತಿ ಕೆಜಿಗೆ 62,157 ರೂ.

ಮಿಸ್ಡ್ ಕಾಲ್ ಮೂಲಕ ಚಿನ್ನದ ದರ ತಿಳಿಯಿರಿ

ಮನೆಯಲ್ಲಿ ಕುಳಿತು ಈ ದರಗಳನ್ನು ನೀವು ಸುಲಭವಾಗಿ ತಿಳಿಯಬಹುದು. 8955664433 ನಂಬರ್ ಗೆ ಮಿಸ್ಡ್ ಕಾಲ್ ನೀಡಿದರೆ ಸಾಕು ಮತ್ತು ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ, ಅದರಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...