alex Certify ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಗೋಲ್ಡ್ ಬಾಂಡ್: 8 ವರ್ಷದಲ್ಲಿ ಶೇ. 128 ರಿಟರ್ನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಗೋಲ್ಡ್ ಬಾಂಡ್: 8 ವರ್ಷದಲ್ಲಿ ಶೇ. 128 ರಿಟರ್ನ್ಸ್

ನವದೆಹಲಿ: ಹೂಡಿಕೆದಾರರಿಗೆ ಸಾವರಿನ್ ಗೋಲ್ಡ್ ಬಾಂಡ್ ಗಳು ಸುರಕ್ಷಿತ ಹೂಡಿಕೆಯ ಸಾಧನಗಳಾಗಿವೆ. ಎಫ್.ಡಿ. ಮೊದಲಾದ ಸಾಂಪ್ರದಾಯಿಕ ಹೂಡಿಕೆಗಳಿಗಿಂತಲೂ ಸಾವರಿನ್ ಗೋಲ್ಡ್ ಬಾಂಡ್ ಗಳು ಉತ್ತಮ ಆದಾಯ ತಂದುಕೊಟ್ಟಿವೆ.

ಗೋಲ್ಡ್ ಬಾಂಡ್ ನ ಮೊದಲ ಕಂತು ನವೆಂಬರ್ 30ಕ್ಕೆ ಮೆಚ್ಯೂರ್ ಆಗಲಿದ್ದು, ಕಳೆದ 8 ವರ್ಷಗಳಲ್ಲಿ ಹೂಡಿಕೆದಾರರಿಗೆ ಭರ್ಜರಿ ಶೇಕಡ 128 ರಷ್ಟು ಆದಾಯ ಸಿಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2015ರಲ್ಲಿ ಮೊದಲ ಕಂತಿನ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಬಿಡುಗಡೆ ಮಾಡಿತ್ತು. ಬಾಂಡ್ ಅವಧಿ 8 ವರ್ಷಗಳಾಗಿವೆ. ನವೆಂಬರ್ 30ಕ್ಕೆ ಅವಧಿ ಪೂರ್ಣಗೊಳ್ಳಲಿದೆ.

ಮೊದಲ ಕಂತಿನ ಗೋಲ್ಡ್ ಬಾಂಡ್ ನಲ್ಲಿ ಚಿನ್ನಕ್ಕೆ ಪ್ರತಿ ಗ್ರಾಂಗೆ 2684 ರೂ. ಇತ್ತು. ಈಗ 6,132 ರೂ. ಇದೆ. ವಾರ್ಷಿಕ ಬೆಳವಣಿಗೆ ದರ ಶೇ. 10.88ರಷ್ಟು ಇದೆ. ಗೋಲ್ಡ್ ಬಾಂಡ್ ನಡಿ ಪಡೆದ ಬಡ್ಡಿಯನ್ನು ಈ ರಿಟರ್ನ್ಸ್ ನಲ್ಲಿ ಸೇರಿಸಿಲ್ಲ. ಹೂಡಿಕೆಯ ಆರಂಭಿಕ ಮೊತ್ತದ ಮೇಲೆ ವಾರ್ಷಿಕವಾಗಿ ಶೇಕಡ 2.75 ರಷ್ಟು ಬಡ್ಡಿ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...