alex Certify ಅಡ್ರೆಸ್​ ಪ್ರೂಫ್​ ನೀಡದೆ ಪಡೆಯಿರಿ LPG ಸಿಲಿಂಡರ್: ಖರೀದಿ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡ್ರೆಸ್​ ಪ್ರೂಫ್​ ನೀಡದೆ ಪಡೆಯಿರಿ LPG ಸಿಲಿಂಡರ್: ಖರೀದಿ ಕುರಿತು ಇಲ್ಲಿದೆ ಮಾಹಿತಿ

ಎಲ್​​ಪಿಜಿ ಸಿಲಿಂಡರ್​ಗಳನ್ನ ಪಡೆಯುವುದು ಇದೀಗ ಇನ್ನಷ್ಟು ಸುಲಭವಾಗಿದೆ. ಇತ್ತೀಚೆಗೆ ತಮ್ಮ ಮನೆಯ ವಿಳಾಸವನ್ನ ಬದಲಾಯಿಸಿದವರು ಹಾಗೂ ಮನೆ ಶಿಫ್ಟ್​ ಮಾಡಲು ಪ್ಲಾನ್​ ಮಾಡುತ್ತಿರುವವರಿಗೆ ನಿಜಕ್ಕೂ ಇದೊಂದು ಸಂತಸದ ವಿಚಾರವಾಗಿದೆ.

ಇಂಡಿಯನ್​ ಆಯಿಲ್​ನ ಚೋಟು 5 ಕೆಜಿ ಸಿಲಿಂಡರ್​ ಪಡೆಯಲು ಗ್ರಾಹಕರು ಯಾವುದೇ ಅಡ್ರೆಸ್​ ಪ್ರೂಫ್​ ನೀಡಬೇಕಾದ ಅವಶ್ಯಕತೆ ಇಲ್ಲ. ಇಂಡೇನ್​​ ವಿತರಕರ ಬಳಿ ಗ್ರಾಹಕರು ಈ ಚೋಟು ಸಿಲಿಂಡರ್​ನ್ನು ಯಾವುದೇ ಪುರಾವೆ ನೀಡದೇ ಪಡೆಯಬಹುದಾಗಿದೆ. ಅಲ್ಲದೇ ಈ ಸಿಲಿಂಡರ್​ಗಳು ನಿಮಗೆ ಇಂಡಿಯನ್​ ಆಯಿಲ್​ ರಿಟೇಲ್​ ಔಟ್​ಲೆಟ್​, ಕಿರಾಣಿ ಅಂಗಡಿ ಹಾಗೂ ಸ್ಥಳೀಯ ಸೂಪರ್​ ಮಾರ್ಕೆಟ್​ಗಳಲ್ಲೂ ಸಿಗಲಿದೆ.

ತಮ್ಮ ಐಡೆಂಟಿಟಿ ಕಾರ್ಡ್​ನ ಕಾಪಿಯನ್ನ ಸಲ್ಲಿಸುವ ಮೂಲಕ ಈ ಸಿಲಿಂಡರ್​ನ್ನು ಗ್ರಾಹಕರು ಪಡೆಯಬಹುದಾಗಿದೆ. ಹಾಗೂ ಈ ಸಿಲಿಂಡರ್​ಗಳನ್ನ ದೇಶದ ಯಾವುದೇ ಕೇಂದ್ರದಲ್ಲಿ ನೀವು ರೀಫಿಲ್​ ಮಾಡಬಹುದಾಗಿದೆ.

ಚೋಟು ಸಿಲಿಂಡರ್​​ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು :

ಚೋಟು ಒಂದು 5 ಕೆಜಿ ಸಿಲಿಂಡರ್​ ಆಗಿದ್ದು ಇಂಡಿಯನ್​ ಆಯಿಲ್​ ಸಂಸ್ಥೆ ಇದನ್ನ ಮಾರಾಟ ಮಾಡುತ್ತಿದೆ.

ಈ ಸಿಲಿಂಡರ್​ನ್ನು ಪಡೆಯಲು ವಿಳಾಸ ಪುರಾವೆ ನೀಡುವ ಅವಶ್ಯಕತೆ ಇಲ್ಲ. ಗ್ರಾಹಕರ ಯಾವುದೇ ಒಂದು ಐಡೆಂಟೆಟಿ ಕಾರ್ಡ್ ಸಲ್ಲಿಕೆ ಮೂಲಕ ಈ ಸಿಲಿಂಡರ್​ ಕೊಳ್ಳಬಹುದಾಗಿದೆ.

5 ಕೆಜಿ ಸಿಲಿಂಡರ್​ ಖರೀದಿ ವೇಳೆ ಸೆಕ್ಯೂರಿಟಿ ಡಿಪಾಸಿಟ್​​ ಪಾವತಿ ಮಾಡಬೇಕೆಂದೇನಿಲ್ಲ.

ದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಚೋಟು ಸಿಲಿಂಡರ್​ ಸೇವೆ ಲಭ್ಯವಿದೆ. ನಿಮ್ಮ ಏರಿಯಾದ ಇಂಡೇನ್​ ವಿತರಕರ ಬಳಿ ನೀವು ಈ ಸಿಲಿಂಡರ್​ ಪಡೆಯಬಹುದಾಗಿದೆ ಅಥವಾ ಇಂಡಿಯನ್ ಆಯಿಲ್​ ಔಟ್​ಲೆಟ್ಸ್, ಆಯ್ದ ಕಿರಾಣಿ ಅಂಗಡಿ ಹಾಗೂ ಸ್ಥಳೀಯ ಸೂಪರ್​ ಮಾರ್ಕೆಟ್​ಗಳಲ್ಲಿ ಲಭ್ಯವಿರಲಿದೆ.

ಈ ಚೋಟು ಸಿಲಿಂಡರ್​ನ್ನು ನೀವು ಹೋಮ್​ ಡೆಲಿವರಿ ಮಾಡಿಸಿಕೊಳ್ಳಬಹುದಾಗಿದೆ, ಇದಕ್ಕಾಗಿ ನೀವು ಹೆಚ್ಚುವರಿ 25 ರೂಪಾಯಿಗಳನ್ನ ಪಾವತಿ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...