alex Certify ಡೀಸೆಲ್ ವಾಹನ ಮಾಲೀಕರಿಗೆ ಇಲ್ಲಿದೆ ‌ʼಬಂಪರ್ʼ‌ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೀಸೆಲ್ ವಾಹನ ಮಾಲೀಕರಿಗೆ ಇಲ್ಲಿದೆ ‌ʼಬಂಪರ್ʼ‌ ಆಫರ್

Fuel prices bringing you down? Not anymore! Here's your chance to refill your tank and win Rs 2 lakh | Personal Finance News | Zee News

ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯ ಜನರ ಜೇಬಿಗೆ ಬಿಸಿ ಮುಟ್ಟಿಸಿದೆ. ಇದೇ ವೇಳೆ ಪೈಸಾ ವಸೂಲ್ ಮಾಡುವ ಅವಕಾಶವನ್ನು ಇಂಡಿಯನ್ ಆಯಿಲ್ ಘೋಷಿಸಿದೆ.

ಇಂಡಿಯನ್ ಆಯಿಲ್‌ನ ಪೆಟ್ರೋಲ್ ಬಂಕ್‌ಗಳಿಂದ 25 ಲೀಟರ್ ಡೀಸೆಲ್ ಖರೀದಿಸುವ 18 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರು ಈ ಅಭಿಯಾನದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

25 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಆದರೆ 2500 ಲೀಟರ್ ಡೀಸೆಲ್ (ಎಕ್ಸ್‌ಟ್ರಾಮಿಲ್ ಸೇರಿದಂತೆ)ಗಿಂತ ಕಡಿಮೆ ಅಥವಾ ಸಮನಾದ ಒಂದೇ ಮುದ್ರಿತ ಬಿಲ್ / ಇ-ರಶೀದಿಯಲ್ಲಿ ಖರೀದಿಸಿದ ಆಯ್ದ ಇಂಡಿಯನ್ ಆಯಿಲ್‌ನ ಚಿಲ್ಲರೆ ಮಾರಾಟ ಮಳಿಗೆಗಳು / ಪೆಟ್ರೋಲ್ ಪಂಪ್‌ಗಳಿಂದ ಖರೀದಿಸುವವರಿಗೆ ಆಫರ್‌ ಇದೆ.

ಲಾಕ್ ಡೌನ್ ಮಾದರಿಯಲ್ಲಿ ಕರ್ನಾಟಕ ಸಂಪೂರ್ಣ ಬಂದ್

ಈ ಆಫರ್ ಏಪ್ರಿಲ್ 4 ರಿಂದ ಪ್ರಾರಂಭವಾಗಿದ್ದು, ಜುಲೈ 31 ರಂದು ಕೊನೆಗೊಳ್ಳಲಿದೆ‌‌. 25 ಲೀಟರ್ ಡೀಸೆಲ್ ಖರೀದಿಸುವ ಗ್ರಾಹಕರು, 7799033333ಗೆ ಡೀಲರ್ ಕೋಡ್, ಬಿಲ್ ಸಂಖ್ಯೆ, ಪ್ರಮಾಣವನ್ನು ಎಸ್‌ಎಂಎಸ್ ಮಾಡಬೇಕು. ಈ ಮೂರು ಮಾಹಿತಿಯನ್ನು ಸಿಂಗಲ್ ಸ್ಪೇಸ್ ಬಿಟ್ಟು ಎಸ್ಎಂಎಸ್ ಮಾಡಬೇಕು.

ಒಬ್ಬ ಗ್ರಾಹಕ‌ ದಿನವೊಂದಕ್ಕೆ ಎರಡು ಬಾರಿ ಮಾತ್ರ ಎಸ್ಎಂಎಸ್ ಕಳಿಸಬಹುದು, ಆದರೆ ಬೇರೆ ಬೇರೆ ಬಂಕ್‌ನಿಂದ ಖರೀದಿಸಿರಬೇಕು. ಅಭಿಯಾನದ ಸಮಯದಲ್ಲಿ ಲಕ್ಕಿ ಡ್ರಾ ಬಹುಮಾನದ ರೂಪದಲ್ಲಿ ಇರುತ್ತವೆ.

4 ಮೆಗಾ ವಿಜೇತರಿಗೆ ತಲಾ 2 ಲಕ್ಷ ರೂ., ತಿಂಗಳಿಗೆ 16 ಮಾಸಿಕ ವಿಜೇತರಿಗೆ ತಲಾ 75,000 ರೂ., ಪ್ರತಿ ಹದಿನೈದು ದಿನಕ್ಕೆ 70 ಹದಿನೈದು ವಿಜೇತರಿಗೆ ತಲಾ 25 ಸಾವಿರ ರೂ., ವಾರಕ್ಕೆ 500 ಸಾಪ್ತಾಹಿಕ ವಿಜೇತರಿಗೆ ತಲಾ 1000 ರೂ. ನೀಡಲಾಗುತ್ತದೆ.

ಪ್ರೀ-ಲೋಡೆಡ್ ವರ್ಚುವಲ್ ಕಾರ್ಡ್‌ಗಳ ರೂಪದಲ್ಲಿ ಬಹುಮಾನದ ಹಣವನ್ನು ವಿತರಿಸಲಾಗುತ್ತದೆ, ಇದನ್ನು ಇಂಧನಗಳನ್ನು ಖರೀದಿಸಲು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ಗಳಲ್ಲಿ ಬಳಸಬಹುದು. ಕಾರ್ಡ್‌ಗಳ ಮಾನ್ಯತೆಯು ವಿತರಣೆಯ ದಿನಾಂಕದಿಂದ ಒಂದು ವರ್ಷವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...