alex Certify ಸ್ಟಾರ್ಟ್ ಅಪ್ ಗಳಿಗೆ ʼಬಂಪರ್ʼ ಕೊಡುಗೆ: ತೆರಿಗೆ ರಜೆ ವಿಸ್ತರಿಸಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ಟ್ ಅಪ್ ಗಳಿಗೆ ʼಬಂಪರ್ʼ ಕೊಡುಗೆ: ತೆರಿಗೆ ರಜೆ ವಿಸ್ತರಿಸಿದ ಕೇಂದ್ರ ಸರ್ಕಾರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಮಹತ್ವದ ಘೋಷಣೆ ಮಾಡಿದ್ದಾರೆ.

ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ಒಂದು ವರ್ಷದ ತೆರಿಗೆ ರಜೆ ಘೋಷಿಸಿದೆ. ಅಂದರೆ, ಸ್ಟಾರ್ಟ್‌ಅಪ್‌ಗಳು ಮಾರ್ಚ್ 31,2022 ರವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ದೇಶಾದ್ಯಂತ ಹರಡಿರುವ ಕೊರೊನಾ ಮಧ್ಯೆ ಸ್ಟಾರ್ಟ್‌ಅಪ್‌ಗಳನ್ನು ಉಳಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರ ಜೊತೆ ಸ್ಟಾರ್ಟ್ಅಪ್‌ಗಳಿಗೆ ನೀಡಲಾಗುವ ಬಂಡವಾಳ ಲಾಭಗಳ ವಿನಾಯಿತಿಯನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ.

ಸ್ಟಾರ್ಟ್ಅಪ್ ಉತ್ತೇಜಿಸಲು ಪಿಎಂ ಮೋದಿ, 2016 ರಲ್ಲಿ ಸ್ಟಾರ್ಟ್ಅಪ್ ಇಂಡಿಯಾವನ್ನು ಪ್ರಾರಂಭಿಸಿದ್ದರು.  ಈ ಕಾರ್ಯಕ್ರಮದ ಮೂಲಕ ಸರ್ಕಾರ ಉದ್ಯಮಶೀಲತೆಯನ್ನು ಉತ್ತೇಜಿಸಲು ಪ್ರಯತ್ನಿಸಿದೆ. ಈ ಯೋಜನೆಯ ಮೂಲಕ ಡಿಪಿಐಐಟಿಯಿಂದ ಗುರುತಿಸಲ್ಪಟ್ಟ ಸ್ಟಾರ್ಟ್ಅಪ್‌ಗಳು ತೆರಿಗೆ ಪ್ರಯೋಜನಗಳ ಲಾಭವನ್ನು ಪಡೆಯುತ್ತವೆ.

ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, ಡಿಸೆಂಬರ್ ಕೊನೆಯ ವಾರದವರೆಗೆ ದೇಶಾದ್ಯಂತ 41061 ಸ್ಟಾರ್ಟ್ಅಪ್ ಗಳಿವೆ. ಇವು ಸರ್ಕಾರದಿಂದ ಮಾನ್ಯತೆ ಪಡೆದಿವೆ. ಇದರಲ್ಲಿ ಸುಮಾರು 39 ಸಾವಿರ ಸ್ಟಾರ್ಟ್ ಅಪ್ ಗಳಲ್ಲಿ 4.7 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...