alex Certify ಭರ್ಜರಿ ರಿಯಾಯಿತಿಯೊಂದಿಗೆ ಫ್ಲಿಪ್ ಕಾರ್ಟ್ ‘ಬಿಗ್ ಬಿಲಿಯನ್ ಡೇಸ್’ ಸೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ರಿಯಾಯಿತಿಯೊಂದಿಗೆ ಫ್ಲಿಪ್ ಕಾರ್ಟ್ ‘ಬಿಗ್ ಬಿಲಿಯನ್ ಡೇಸ್’ ಸೇಲ್

ನವದೆಹಲಿ: ವಾಲ್ ಮಾರ್ಟ್ ಒಡೆತನದ ಇ-ಕಾಮರ್ಸ್ ಜಾಲತಾಣ ಫ್ಲಿಪ್ ಕಾರ್ಟ್ ಅಕ್ಟೋಬರ್ 16 ರಿಂದ 21 ರವರೆಗೆ ಹಬ್ಬದ ಮಾರಾಟ ಬಿಗ್ ಬಿಲಿಯನ್ ಡೇಸ್ ರಿಯಾಯಿತಿ ಮಾರಾಟ ಘೋಷಿಸಲಾಗಿದೆ.

ಗ್ರಾಹಕರಿಗೆ ವೈವಿಧ್ಯಮಯ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದು ಎಸ್.ಬಿ.ಐ. ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದ ಗ್ರಾಹಕರು ಶೇಕಡ 10 ರಷ್ಟು ರಿಯಾಯಿತಿ ಪಡೆಯಬಹುದು. ಪ್ರಮುಖ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ ಬಡ್ಡಿ ರಹಿತ ಇಎಂಐ ಮೂಲಕ ಖರೀದಿಗೆ ಅವಕಾಶ ನೀಡಲಾಗುವುದು.

ವಾಲೆಟ್ ಮತ್ತು ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯವಿರುತ್ತದೆ. ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಬಿಗ್ ಬಿಲಿಯನ್ ಡೇಸ್ ಉತ್ಸವ ಮತ್ತು ಮಾರಾಟದಲ್ಲಿ 70 ಸಾವಿರ ನೇರ ಮತ್ತು ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...