alex Certify ಗಮನಿಸಿ: ಇಎಂಐ ಮೂಲಕವೂ ಪಾವತಿಸಬಹುದು ʼಆರೋಗ್ಯ ವಿಮೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಇಎಂಐ ಮೂಲಕವೂ ಪಾವತಿಸಬಹುದು ʼಆರೋಗ್ಯ ವಿಮೆʼ

Health Insurance – Compare & Buy Best Health Insurance Plans Online| Finserv MARKETS

ಆರೋಗ್ಯ ವಿಮೆ ಪಾಲಿಸಿಯ ಪ್ರೀಮಿಯಂ ಮಾಸಿಕ ಕಂತುಗಳಲ್ಲಿ (ಇಎಂಐ) ಪಾವತಿಸಬಹುದು. ವಿಮೆ ಕಂಪನಿಗಳು ಜಾರಿಗೆ ತಂದಿರುವ ಈ ಯೋಜನೆಯಿಂದ ಅನೇಕರಿಗೆ ಪ್ರಯೋಜನವಾಗಿದೆ. ಬಹುತೇಕರು ಮಾಸಿಕ ಪ್ರೀಮಿಯಂ ಆಯ್ದುಕೊಳ್ತಿದ್ದಾರೆ.

ಕೊರೊನಾದಿಂದಾಗಿ ಅನೇಕರ ಸಂಬಳದಲ್ಲಿ ಕಡಿತವಾಗಿದೆ. ಮತ್ತೆ ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಮಾಸಿಕ ಕಂತುಗಳಲ್ಲಿ ಪಾವತಿಸುತ್ತಿದ್ದಾರೆ.

ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಇಎಂಐ ಮೂಲಕ ಪಾವತಿಸುವ ಸೌಲಭ್ಯ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಯಿತು. ಗ್ರಾಹಕರ ಹಿತದೃಷ್ಟಿಯಿಂದ ವಿಮಾ ನಿಯಂತ್ರಕ ಐಆರ್‌ಡಿಎ ಈ ಯೋಜನೆಯನ್ನು ಜಾರಿಗೆ ತಂದಿತು. ವಿಮಾ ಕಂಪನಿಯು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾವತಿ ಆಧಾರದ ಮೇಲೆ ಆರೋಗ್ಯ ವಿಮೆಯನ್ನು ಮಾರಾಟ ಮಾಡಬಹುದು ಎಂದು ಐಆರ್ಡಿಎ ತನ್ನ ಆದೇಶದಲ್ಲಿ ತಿಳಿಸಿತ್ತು.

ಕೊರೊನಾ ಸಾಂಕ್ರಾಮಿಕ ರೋಗದ ನಂತರ ಈ ವರ್ಷ ಏಪ್ರಿಲ್ ನಲ್ಲಿ, ಐಆರ್ಡಿಎ ಈ ಸೌಲಭ್ಯವನ್ನು ಹೆಚ್ಚಿಸಲು ನಿರ್ದೇಶಿಸಿತು. ಸದ್ಯ ಒಂದು ಡಜನ್ ಗಿಂತ ಹೆಚ್ಚು ಕಂಪನಿಗಳು ಈ ಆಯ್ಕೆಯನ್ನು ನೀಡುತ್ತಿವೆ. ಹೊಸ ಗ್ರಾಹಕರು ಹೆಚ್ಚಾಗಿ ಈ ಮಾಸಿಕ ಪಾಲಿಸಿ ಆಯ್ಕೆಯನ್ನು ಇಷ್ಟಪಡ್ತಿದ್ದಾರೆ. ಹಾಗೆ ಶೇಕಡಾ 70ರಷ್ಟು ಮಂದಿ ಫ್ಯಾಮಿಲಿ ಫ್ಲೋಟರ್ ಆಯ್ಕೆ ಆರಿಸಿಕೊಳ್ತಿದ್ದಾರೆ. ಇದ್ರಲ್ಲಿ ಕುಟುಂಬದ ಸದಸ್ಯರು ಸೇರುತ್ತಾರೆ. ಕುಟುಂಬದ ಸದಸ್ಯರಿಗಾಗಿ ಪ್ರತ್ಯೇಕ ವಿಮೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...