alex Certify 21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್ʼ‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್ʼ‌ ಸುದ್ದಿ

ನೌಕರರ ರಾಜ್ಯ ವಿಮಾ ನಿಗಮದಡಿ ಬರುವ ನೌಕರರು ಇಎಸ್ಐಸಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲಿದ್ದಾರೆ. ಫೆಬ್ರವರಿ 1ರಿಂದ ಎಲ್ಲ 735 ಜಿಲ್ಲೆಗಳಲ್ಲಿ ಆರೋಗ್ಯ ಸಂಬಂಧಿ ಸೇವೆ ಸಿಗಲಿದೆ. ಸದ್ಯ 387 ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಲಭ್ಯವಿತ್ತು. 187 ಜಿಲ್ಲೆಗಳಲ್ಲಿ ಭಾಗಶಃ ಸೇವೆಗಳು ಲಭ್ಯವಿದ್ರೆ 161 ಜಿಲ್ಲೆಗಳಲ್ಲಿ ಇಎಸ್ಐಸಿ ನೌಕರರಿಗೆ ಯಾವುದೇ ಸೇವೆ ಲಭ್ಯವಿರಲಿಲ್ಲ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್‌ ಸುದ್ದಿ: 69 ಸಾವಿರ ರೂ. ಸಂಬಳದ ಹುದ್ದೆಗೆ ನೇಮಕಾತಿ

ಇಎಸ್ಐಸಿ ಅಡಿಯಲ್ಲಿ ಬರುವ ನೌಕರರು ಈವರೆಗೆ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಪಡೆಯುತ್ತಿದ್ದರು. ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ ಇಎಸ್ಐಸಿ ಅಡಿ ಬರುವ ಎಲ್ಲ ನೌಕರರಿಗೆ ಈ ಸೇವೆ ಸಿಗಲಿದೆ. ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ಸಿಕ್ಕಿದೆ. ಏಪ್ರಿಲ್ 1ರಿಂದ ಎಲ್ಲ ಜಿಲ್ಲೆಗಳಲ್ಲಿ ಇಎಸ್ಐಸಿ ನೌಕರರಿಗೆ ಇಎಸ್ಐ ಯೋಜನೆಯಡಿ ಸೇವೆ ಸಿಗಲಿದೆ.

ಇಎಸ್ಐಸಿ ಫಲಾನುಭವಿಗಳು ಎಬಿಪಿಎಂಜೆವೈ ಆಸ್ಪತ್ರೆಯಲ್ಲಿ ಸೇವೆಯನ್ನು ಪಡೆಯಬಹುದು. ಹಾಗೆ ಎಬಿಪಿಎಂಜೆವೈ ಫಲಾನುಭವಿಗಳು ಇಎಸ್ಐಸಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಂಬಂಧಿ ಸೇವೆಗಳನ್ನು ಪಡೆಯಬಹುದು. ಅನೇಕ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಕೈಗಾರಿಕಾ ಕಾರ್ಮಿಕರನ್ನು ಇಎಸ್ಐಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಪ್ರತಿ ತಿಂಗಳು ಸಂಬಳದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ. ಇದನ್ನು ಇಎಸ್ಐಸಿ ವೈದ್ಯಕೀಯ ಪ್ರಯೋಜನಕ್ಕೆ ಠೇವಣಿ ಇಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...