alex Certify ಟ್ವಿಟರ್​ ಪೋಸ್ಟ್​ ಮೂಲಕ ಮತ್ತೊಂದು ಕಂಪನಿ ಅದೃಷ್ಟ ಬದಲಿಸಿದ ಎಲಾನ್ ಮಸ್ಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಪೋಸ್ಟ್​ ಮೂಲಕ ಮತ್ತೊಂದು ಕಂಪನಿ ಅದೃಷ್ಟ ಬದಲಿಸಿದ ಎಲಾನ್ ಮಸ್ಕ್​..!

ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಸಿಇಓ ಎಲಾನ್​ ಮಸ್ಕ್​​ ತಾನು ಕೆಲ ದಿನಗಳ ಕಾಲ ಟ್ವಿಟರ್​​ನಿಂದ ಬ್ರೇಕ್​ ತೆಗೆದುಕೊಳ್ಳೋದಾಗಿ ಹೇಳಿದ್ರು. ಆದರೆ ಈ ಮಾಹಿತಿ ನೀಡಿದ ಒಂದೇ ದಿನದ ಬಳಿಕ ಟ್ವಿಟರ್​ಗೆ ವಾಪಸ್ಸಾಗಿದ್ದಾರೆ.

ಟ್ವಿಟರ್​ಗೆ ವಾಪಸ್ಸಾಗುತ್ತಿದ್ದಂತೆಯೇ ಎಲಾನ್​ ಮಸ್ಕ್​​ ಕಂಪನಿಯೊಂದರ ಹಣೆಬರಹವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಟ್ವಿಟರ್​ನಲ್ಲಿ ಎಲಾನ್​ ಮಸ್ಕ್​​ ಡಾಗ್​ ಕಾಯಿನ್​ನ್ನು ತನ್ನ ಇಷ್ಟವಾದ ಕ್ರಿಪ್ಟೋ ಕರೆನ್ಸಿ ಎಂದು ಹೇಳಿದ್ದಾರೆ.

ಅವರು ತಮ್ಮ ಟ್ವೀಟ್​ ಜೊತೆಗೆ ಒಂದು ಗ್ರಾಫಿಕ್ಸ್​ನ್ನೂ ಶೇರ್​ ಮಾಡಿದ್ದಾರೆ. ಈ ಗ್ರಾಫಿಕ್ಸ್​ನಲ್ಲಿ ಡಾಗ್​​ ಕಾಯಿನ್​ ಲೋಗೋದ ಜೊತೆಗೆ ಒಂದು ದೊಡ್ಡ ಪರ್ವತದ ತುತ್ತ ತುದಿಯಲ್ಲಿ ನಿಂತಿದ್ದಾರೆ.

ಇಷ್ಟೇ ಅಲ್ಲ, ಡಾಗ್​ ಕಾಯಿನ್​ ವಿಚಾರವಾಗಿ ಎಲಾನ್​ ಮಸ್ಕ್​ ಒಂದು ಗಂಟೆಯ ಅವಧಿಯಲ್ಲಿ 9 ಟ್ವೀಟ್​ಗಳನ್ನ ಮಾಡಿದ್ದಾರೆ. ಮಸ್ಕ್​ರ ಈ ಟ್ವೀಟ್​ ಬಳಿಕ ನೆಟ್ಟಿಗರು ಮಸ್ಕ್​ರನ್ನ ಡಾಗ್​ ಕಾಯಿನ್​ ಸಿಇಓ ಎಂದು ಘೋಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಡಾಗ್​ ಕಾಯಿನ್​ ಅನ್ನೋದು ಒಂದು ಕ್ರಿಪ್ಟೋ ಕರೆನ್ಸಿ ಆಗಿದೆ. ಮಸ್ಕ್​ರ ಸರಣಿ ಟ್ವೀಟ್​ ಪೋಸ್ಟ್ ಮಾಡಿ 45 ನಿಮಿಷಗಳ ಬಳಿಕ ಕಂಪನಿಯ ಶೇರ್​ ಸರಿ ಸುಮಾರು 60 ಪ್ರತಿಶತ ವೇಗದಲ್ಲಿ ಏರಿಕೆ ಕಂಡಿದೆ.

ಎಲಾನ್​ ಮಸ್ಕ್​ ಕಳೆದು ತಿಂಗಳು ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ರನ್ನ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನ ಅಲಂಕರಿಸಿದ್ರು. ಇದಾದ ಬಳಿಕ ಟ್ವಿಟರ್​ನಲ್ಲಿ ಮಸ್ಕ್​ ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಪ್ರತಿಯೊಂದು ಕಂಪನಿಯೂ ಅತ್ಯುತ್ತಮ ಲಾಭ ಗಳಿಸುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಮೀಮ್ಸ್​ ಸುರಿಮಳೆಯೇ ಹರಿದಿದೆ.

— Elon Musk (@elonmusk) February 4, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...