alex Certify ಗ್ರಾಮೀಣ ಪ್ರದೇಶದವರೂ ಸೇರಿ ರಾಜ್ಯದ ಜನತೆಗೆ ಸಿಹಿ ಸುದ್ದಿ: ವಿದ್ಯುತ್ ದರ ಯುನಿಟ್ ಗೆ 70 ಪೈಸೆಯಿಂದ 2 ರೂ.ವರೆಗೆ ಕಡಿತ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಪ್ರದೇಶದವರೂ ಸೇರಿ ರಾಜ್ಯದ ಜನತೆಗೆ ಸಿಹಿ ಸುದ್ದಿ: ವಿದ್ಯುತ್ ದರ ಯುನಿಟ್ ಗೆ 70 ಪೈಸೆಯಿಂದ 2 ರೂ.ವರೆಗೆ ಕಡಿತ ಸಾಧ್ಯತೆ

ಬೆಂಗಳೂರು: ಹೊಸ ವರ್ಷಕ್ಕೆ ಮೊದಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ವಿದ್ಯುತ್ ದರ ಇಳಿಕೆಗೆ ಚಿಂತನೆ ನಡೆದಿದೆ.

ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ದರ ಕಡಿತ ಮಾಡಲು ಚಿಂತನೆ ನಡೆದಿದೆ. ಬಳಕೆದಾರರ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಪ್ರತಿ ಯೂನಿಟ್ ಗೆ 70 ಪೈಸೆಯಿಂದ ಎರಡು ರೂಪಾಯಿವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.

ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡಲಾಗುತ್ತದೆ. 50 ಯೂನಿಟ್ ವರೆಗೆ ಲೈಫ್ ಲೈನ್ ಬಳಕೆಯಲ್ಲಿ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ ವಿಧಿಸುತ್ತಿದ್ದ 4.15 ರೂ. ಮತ್ತು 4.05 ರೂ. ಬದಲಿಗೆ 3.6 ರೂ. ಶುಲ್ಕ ವಿಧಿಸಲು ಚಿಂತನೆ ನಡೆದಿದೆ.

50 ರಿಂದ 200 ಯೂನಿಟ್ ವರೆಗಿನ ಸ್ಲ್ಯಾಬ್ ವಿಲೀನಗೊಳಿಸಿ ಆರಂಭಿಕ ದರ ಯೂನಿಟ್ ಗೆ 3.60 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ನಂತರದ ಯೂನಿಟ್ ಗಳಿಗೆ 4.60 ರೂ. ಶುಲ್ಕ ವಿಧಿಸಲಾಗುವುದು. 200 ಯೂನಿಟ್ ಗಿಂತ ಹೆಚ್ಚಿನ ಬಳಕೆಗೆ 7 ರೂ. ದರ ವಿಧಿಸುವ ಸಾಧ್ಯತೆ ಇದ್ದು, ಕೈಗಾರಿಕೆಗಳಿಗೂ ಈ ಸೌಲಭ್ಯ ಸಿಗಲಿದೆ.

ಅನಗತ್ಯ ವೆಚ್ಚಗಳಿಗೆ ಕಡಿವಾಳ ಹಾಕಿ ಗ್ರಾಹಕ ಸ್ನೇಹಿಯಾಗಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...