alex Certify ಗ್ರಾಹಕರಿಗೆ ಗುಡ್ ನ್ಯೂಸ್: ವಿದ್ಯುತ್ ಬಿಲ್ ಮನ್ನಾ ಸೇರಿ ಹಲವು ವಿನಾಯಿತಿ ನೀಡಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಗುಡ್ ನ್ಯೂಸ್: ವಿದ್ಯುತ್ ಬಿಲ್ ಮನ್ನಾ ಸೇರಿ ಹಲವು ವಿನಾಯಿತಿ ನೀಡಿದ ಸರ್ಕಾರ

ಬೆಂಗಳೂರು: ಲಾಕ್ಡೌನ್ ಜಾರಿ ಮಾಡಿರುವುದರಿಂದ ವಿದ್ಯುತ್ ಬಿಲ್ ಮನ್ನಾ, ರಿಯಾಯಿತಿ, ಪ್ರೋತ್ಸಾಹಕ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಏಪ್ರಿಲ್, ಮೇ ಮತ್ತು ಜೂನ್ ತಿಂಗಳ 30 ರವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡದಿರಲು ತೀರ್ಮಾನಿಸಲಾಗಿದೆ. ಮೂರು ತಿಂಗಳಿಗೆ ಅನ್ವಯವಾಗುವಂತೆ ಗ್ರಾಹಕರಿಗೆ ಕೆಲವು ವಿನಾಯಿತಿ ನೀಡಲಾಗಿದೆ.

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ ನಿಗದಿತ ಶುಲ್ಕವನ್ನು ಏಪ್ರಿಲ್, ಮೇ ತಿಂಗಳಿಗೆ ಅನ್ವಯವಾಗುವಂತೆ ಮನ್ನಾ ಮಾಡಲಾಗಿದೆ. ಅದೇ ರೀತಿ ಬೃಹತ್ ಕೈಗಾರಿಕೆಗಳು ಏಪ್ರಿಲ್, ಮೇ ತಿಂಗಳಿಗೆ ಅನ್ವಯವಾಗುವಂತೆ ಪಾವತಿ ಮಾಡಬೇಕಿರುವ ವಿದ್ಯುತ್ ಬಿಲ್ ನಿಗದಿತ ಶುಲ್ಕವನ್ನು ಜೂನ್ 30 ರವರೆಗೆ ಮುಂದೂಡಲಾಗಿದೆ.

ಬಿಲ್ ಪಾವತಿಸಲು ನಿಗದಿಪಡಿಸಿದ 15 ದಿನಗಳ ಜೊತೆಗೆ ಹೆಚ್ಚುವರಿಯಾಗಿ 15 ದಿನ ನೀಡಲಾಗುವುದು. 30 ದಿನಗಳ ಅವಧಿಯಲ್ಲಿ ಬಿಲ್ ಕಟ್ಟದಿದ್ದರೆ ಬಾಕಿ ಮೊತ್ತಕ್ಕೆ ಬಡ್ಡಿ ಹಾಕುವುದಿಲ್ಲ. ವಿಳಂಬವಾಗಿರುವ ದಿನಗಳಿಗೆ ಮಾತ್ರ ಅನ್ವಯವಾಗುವಂತೆ ಮಾಸಿಕ ಶೇಕಡ 0.5 ರಷ್ಟು ಸುಲಭ ಬಡ್ಡಿ ವಿಧಿಸಬಹುದು. ಏಪ್ರಿಲ್, ಮೇ ಮತ್ತು ಜೂನ್ 30 ರವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಏಪ್ರಿಲ್-ಮೇ ತಿಂಗಳ ವಿದ್ಯುತ್ ಬಿಲ್ ಅನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುವುದು. ವಿದ್ಯುತ್ ಗ್ರಾಹಕರಿಗೆ ಅನುಕೂಲವಾಗುವಂತೆ ಕೆಲವೊಂದು ರಿಯಾಯಿತಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...