alex Certify ಶೀಘ್ರದಲ್ಲೇ ರೈಲುಗಳಲ್ಲಿ ಇ-ಕೆಟರಿಂಗ್‌‌ ಮರು ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೇ ರೈಲುಗಳಲ್ಲಿ ಇ-ಕೆಟರಿಂಗ್‌‌ ಮರು ಆರಂಭ

ಕೋವಿಡ್-19 ಕಾರಣದಿಂದ ತನ್ನ ಸೇವೆಗಳಲ್ಲಿ ಕಡಿತ ಮಾಡಿದ್ದ ಭಾರತೀಯ ರೈಲ್ವೇ ಇದೀಗ ಹಂತಹಂತವಾಗಿ ಸಹಜತೆಯತ್ತ ವಾಲುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈಲು ಗಾಡಿಗಳನ್ನು ಓಡಿಸಲು ಆರಂಭಿಸಿದೆ.

ಪ್ರಯಾಣಿಕರಿಗೆ ಇ-ಕೆಟರಿಂಗ್ ಸೇವೆಗಳನ್ನು ಶೀಘ್ರದಲ್ಲೇ ಮರು ಆರಂಭಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಆರಂಭದಲ್ಲಿ ದೇಶದ ಕೆಲವೇ ನಿಲ್ದಾಣಗಳಲ್ಲಿ ಇ-ಕೆಟರಿಂಗ್ ಸೇವೆಗಳನ್ನು ಒದಗಿಸಲಾಗುತ್ತದೆ. ಸ್ಥಳೀಯ ಆಡಳಿತಗಳ ನಿರ್ಬಂಧಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸಬಲ್ಲ ಸೇವಾದಾರರ ಲಭ್ಯತೆ ಮೇಲೆ ಇ-ಕೆಟರಿಂಗ್ ಸೇವೆಯ ಪ್ರಮಾಣ ನಿರ್ಧರಿಸಲಾಗುತ್ತದೆ.

ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಲು ಕೋರಿ ರೈಲ್‌ರೆಸ್ಟ್ರೋ ಸಿಇಓ ಮನಿಷ್‌ ಚಂದ್ರ ಮಾಡಿಕೊಂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೇ ಸಚಿವಾಲಯ, ಜನವರಿ ಕೊನೆ ವಾರದಿಂದ ಈ ಸೇವೆಗೆ ಮರುಚಾಲನೆ ನೀಡಲು ಅನುಮತಿ ಕೊಟ್ಟಿದೆ. ಇದೇ ವೇಳೆ ಉತ್ಕೃಷ್ಟ ಗುಣಮಟ್ಟದ ಸ್ವಚ್ಛತೆ ಹಾಗೂ ಸಂಪರ್ಕರಹಿತ ಡೆಲಿವರಿಗೆ ಆದ್ಯತೆ ಕೊಡಲು ರೈಲ್ವೇ ತನ್ನ ರೆಸ್ಟೋರಂಟ್ ಪಾಲುದಾರರಿಗೆ ಸೂಚನೆ ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...