alex Certify ಗಮನಿಸಿ…! ಅಡುಗೆ ಅನಿಲ ದರ ಪರಿಷ್ಕರಣೆ, ಬ್ಯಾಂಕ್ ನಿಯಮ ಸೇರಿ ಇಂದಿನಿಂದ ಏನೆಲ್ಲ ಬದಲಾವಣೆ ಆಗ್ತಿವೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಅಡುಗೆ ಅನಿಲ ದರ ಪರಿಷ್ಕರಣೆ, ಬ್ಯಾಂಕ್ ನಿಯಮ ಸೇರಿ ಇಂದಿನಿಂದ ಏನೆಲ್ಲ ಬದಲಾವಣೆ ಆಗ್ತಿವೆ ಗೊತ್ತಾ…?

ನವದೆಹಲಿ: ಡಿಎಲ್, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ.

ಜುಲೈ 1 ರ ಇಂದಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಬ್ಯಾಂಕ್ ಠೇವಣಿ ಸೇವಾ ಶುಲ್ಕವನ್ನು ಬದಲಾವಣೆ ಮಾಡಲಾಗುವುದು. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕೂಡ ಪರಿಷ್ಕರಿಸಲಾಗುತ್ತದೆ.

SBI ನಿಯಮದಲ್ಲಿ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಜುಲೈ 1 ರಿಂದ ಎಲ್ಲ ಎಸ್ಬಿಐ ಖಾತೆದಾರರಿಗೆ ಹೊಸ ಪರಿಷ್ಕೃತ ಸೇವಾ ಶುಲ್ಕಗಳು ಅನ್ವಯವಾಗುತ್ತವೆ ಎಂದು ತಿಳಿಸಿದೆ. ಎಟಿಎಂನಿಂದ ಹಣ ಹಿಂಪಡೆಯುವುದು, ಹಣ ವರ್ಗಾವಣೆಯಂತಹ ವಹಿವಾಟುಗಳಿಗೆ ಶುಲ್ಕ ಅನ್ವಯವಾಗಲಿದೆ. ಕನಿಷ್ಠ ಬ್ಯಾಲೆನ್ಸ್ ನಿಂದ ಇಂತಹ ಖಾತೆಗಳು ಮುಕ್ತವಾಗಿರುತ್ತವೆ. ಜುಲೈ 1 ರ ನಂತರ ಎಟಿಎಂ ಅಥವಾ ಬ್ಯಾಂಕ್ ಶಾಖೆಯಿಂದ ತಿಂಗಳಲ್ಲಿ ನಾಲ್ಕು ಸಲ ಉಚಿತವಾಗಿ ವಹಿವಾಟು ನಡೆಸಬಹುದು. ನಂತರ ಗ್ರಾಹಕರು 15 ರೂ. ಶುಲ್ಕ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

LPG ದರ ಪರಿಷ್ಕರಣೆ

ಜುಲೈ 1 ರಂದು ಎಲ್ಪಿಜಿ ದರಗಳ ಪರಿಷ್ಕರಣೆ ಮಾಡಲಾಗುವುದು. ತೈಲ ಕಂಪನಿಗಳಿಂದ ದರಗಳನ್ನು ಪರಿಷ್ಕರಿಸಲಾಗುತ್ತದೆ. ಅಡುಗೆ ಅನಿಲ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸಲಿದ್ದು, ತೈಲಕಂಪನಿಗಳು ಮಾರುಕಟ್ಟೆಯ ಏರಿಳಿತ, ಬೇಡಿಕೆ ಮತ್ತು ಪೂರೈಕೆ ಅಂತರಕ್ಕೆ ಅನುಗುಣವಾಗಿ ಬೆಲೆಗಳನ್ನು ಪರಿಷ್ಕರಣೆ ಮಾಡಲಿವೆ.

ಡ್ರೈವಿಂಗ್ ಲೈಸೆನ್ಸ್

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದ್ದು, ಮನೆಯಲ್ಲಿಯೇ ಕಲಿಕಾ ಪರವಾನಿಗೆ ಪಡೆಯಬಹುದು. ಆರ್.ಟಿ.ಒ. ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಜುಲೈ 1 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಡಿಎಲ್ ಕೋರ್ಸ್ ಮುಗಿದ ನಂತರ ಅಗತ್ಯವಾದ ಮಾನದಂಡಗಳನ್ನು ಪೂರೈಸಿದ ಬಳಿಕ ನಿಗದಿಪಡಿಸಿದ ಡ್ರೈವಿಂಗ್ ಸ್ಕೂಲ್ ನಿಂದ ಡಿಎಲ್ ಪಡೆಯಬಹುದಾಗಿದೆ.

ಸಿಂಡಿಕೇಟ್ ಬ್ಯಾಂಕ್ IFSC ಕೋಡ್ ಬದಲಾವಣೆ

ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ಐಎಫ್ಎಸ್ಸಿ ಕೋಡ್ ಬದಲಾವಣೆಯಾಗಲಿದೆ. ಕೆನರಾ ಬ್ಯಾಂಕ್ ನೊಂದಿಗೆ ವಿಲೀನವಾದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಜುಲೈ 1 ರಿಂದ ಬದಲಾದ ಐಎಫ್ಎಸ್ಸಿ ಕೋಡ್ ಬಳಸಬೇಕಿದೆ. ಕೆನರಾ ಬ್ಯಾಂಕ್ ವೆಬ್ ಸೈಟ್ ನಿಂದ ಬದಲಾದ ಐಎಫ್ಎಸ್ಸಿ ಕೋಡ್ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ದ್ವಿಚಕ್ರವಾಹನ ದುಬಾರಿ

ಜುಲೈ 1 ರಿಂದ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಬೈಕ್ ಮತ್ತು ಸ್ಕೂಟಿ ಗಳ ಬೆಲೆ ಏರಿಕೆ ಮಾಡಲಿದೆ ಎನ್ನಲಾಗಿದೆ.

TDS ದಂಡ ದುಬಾರಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಎರಡು ವರ್ಷದಿಂದ ಟಿಡಿಎಸ್ ಸಲ್ಲಿಸಿದವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಜುಲೈ 1 ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ, ತೆರಿಗೆದಾರರ ವಾರ್ಷಿಕ ಟಿಡಿಎಸ್ 50 ಸಾವಿರ ರೂಪಾಯಿಗಿಂತ ಜಾಸ್ತಿ ಇದ್ದರೆ ಅವರಿಗೆ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಹೊಸ ಚೆಕ್ ಬುಕ್ ವಿತರಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ಬಳಕೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. 10 ಚೆಕ್  ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ನಂತರ, ಚೆಕ್ ಬುಕ್ ಪಡೆದುಕೊಳ್ಳಲು ಹೆಚ್ಚುವರಿ ಶುಲ್ಕ ಮತ್ತು ಜಿಎಸ್ಟಿ ಪಾವತಿಸಬೇಕಿದೆ. ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನವಾಗಿದ್ದು, ವಿಲೀನವಾದ ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಬುಕ್ ಪಡೆಯಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...