alex Certify ಮದ್ಯ ಮಾರಾಟ ಆರಂಭವಾದ ಮೂರೇ ದಿನಕ್ಕೆ ಸರ್ಕಾರದಿಂದ ʼಬಿಗ್ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಮಾರಾಟ ಆರಂಭವಾದ ಮೂರೇ ದಿನಕ್ಕೆ ಸರ್ಕಾರದಿಂದ ʼಬಿಗ್ ಶಾಕ್ʼ

ಆಂಧ್ರಪ್ರದೇಶ, ದೆಹಲಿ, ಪಶ್ಚಿಮಬಂಗಾಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದ ಸರ್ಕಾರ ಕೋವಿಡ್ -19 ಹೆಸರಿನಲ್ಲಿ ಸುಂಕವನ್ನು ಹೆಚ್ಚಳ ಮಾಡಿದೆ.

ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದ್ದು, ರಾಜ್ಯದಲ್ಲಿ ಮದ್ಯ ಮತ್ತಷ್ಟು ದುಬಾರಿಯಾಗಿದೆ. ಮದ್ಯದ ಮೇಲೆ ಶೇಕಡ 17 ರಷ್ಟು ಶುಲ್ಕ ವಿಧಿಸಲಾಗಿದೆ. ಇಂದು ಹಳೆಯ ದರಕ್ಕೆ ಮದ್ಯ ಮಾರಾಟ ಮಾಡಲಾಗಿದೆ. ನಾಳೆಯಿಂದ ಪರಿಷ್ಕೃತ ದರದಲ್ಲಿ ಮದ್ಯ ಮಾರಾಟವಾಗಲಿದ್ದು ಶೇಕಡ 11 ರಷ್ಟು ದುಬಾರಿಯಾಗಲಿದೆ.

ಅಬಕಾರಿ ಸುಂಕ ಶೇಕಡ 17ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಶೇಕಡ 6 ರಷ್ಟು ಸುಂಕ ಬಜೆಟ್ ನಲ್ಲಿ ಹೆಚ್ಚಳ ಮಾಡಿದ್ದು, ನಿನ್ನೆಯಿಂದ ಜಾರಿಗೆ ಬಂದಿದೆ. ಈಗ ಶೇಕಡ 11 ರಷ್ಟು ಕೊರೋನಾ ಸುಂಕ ಹಾಕಲಾಗಿದೆ.

ಬಿಯರ್, ವೈನ್, ನೀರಾ ಮೇಲೆ ಸುಂಕ ಹೆಚ್ಚಳ ಮಾಡಲಾಗಿಲ್ಲ. ಬ್ರಾಂಡಿ, ವಿಸ್ಕಿ, ರಮ್ ಇತರೆ ಮದ್ಯಗಳ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಒಂದರಿಂದ 4 ಸ್ಲ್ಯಾಬ್ ಮದ್ಯದ ಸುಂಕ ಶೇಕಡ 6 ರಷ್ಟು ಹೆಚ್ಚಳ ಮಾಡಲಾಗಿದೆ. ಕಡಿಮೆ ಬೆಲೆಯ ಮದ್ಯದ ಸುಂಕದಲ್ಲಿ ಶೇಕಡ 17ರಷ್ಟು ಹೆಚ್ಚಳ ಮಾಡಲಾಗಿದೆ. ದುಬಾರಿ ಮದ್ಯದ ಸುಂಕ ಶೇಕಡ 25ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...