alex Certify C-ಮಾಸ್ಕ್ ಧರಿಸಿ 8 ಭಾಷೆಗಳಲ್ಲಿ ಮಾತನಾಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

C-ಮಾಸ್ಕ್ ಧರಿಸಿ 8 ಭಾಷೆಗಳಲ್ಲಿ ಮಾತನಾಡಿ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನೀ ಸಂಶೊಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ.

ಮಾಸ್ಕ್‌ ಇರುವ ಕಾರಣದಿಂದ ಸರಿಯಾಗಿ ಸಂವಹನ ಮಾಡಲು ಆಗದೇ ಇರುವ ಮಂದಿಗೆ, ಜಪಾನೀಸ್ ಇಂಜಿನಿಯರ್‌ಗಳು ಈ ವಿನೂತನ ಮಾಸ್ಕ್ ತಂದಿದ್ದು, ಇದನ್ನು ಧರಿಸಿ ನೀವು 8 ವಿವಿಧ ಭಾಷೆಗಳಲ್ಲಿ ಮಾತನಾಡಬಹುದಾಗಿದೆ. ಸಿಲಿಕೋನ್ ಹಾಗೂ ಬಿಳಿ ಪ್ಲಾಸ್ಟಿಕ್‌ನಿಂದ ಮಾಡಲಾಗಿರುವ ಈ C-ಮಾಸ್ಕ್‌ನಲ್ಲಿ ಮೈಕ್ರೋಫೋನ್‌ ಇದ್ದು, ಅದನ್ನು ಬಾಯಿಗೆ ಧರಿಸಿ, ಅದನ್ನು ಬ್ಲೂಟೂತ್‌ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಈ ಮೂಲಕ ಎಂಟು ವಿವಿಧ ಭಾಷೆಗಳಲ್ಲಿ ನೀವು ಮಾತನಾಡುವುದನ್ನು ಭಾಷಾಂತರಿಸಲಿದೆ ಈ C-ಮಾಸ್ಕ್‌. ಸದ್ಯಕ್ಕೆ ಇದರಲ್ಲಿ ಭಾರತೀಯ ಭಾಷೆಗಳ ಆಯ್ಕೆ ಇಲ್ಲ. ನಿಮಗೇನಾದರೂ ಈ ಮಾಸ್ಕ್ ಬೇಕಾದಲ್ಲಿ ಬೇಡಿಕೆ ಮೇಲೆ ಭಾರತೀಯ ಭಾಷೆಯನ್ನು ಅಳವಡಿಸಿಕೊಳ್ಳಬಹುದಾಗಿದೆ.

ಸೋಂಕಿನಿಂದ ರಕ್ಷಿಸಿಕೊಳ್ಳಲು ಇರುವ ಮಾಮೂಲಿ ಮಾಸ್ಕ್ ಮೇಲೆ ಈ C ಫೇಸ್ ಸ್ಮಾರ್ಟ್ ಮಾಸ್ಕ್‌ ಅನ್ನು ಧರಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...