alex Certify DL ಪಡೆಯಲು ಮುಂದಾಗಿರುವವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DL ಪಡೆಯಲು ಮುಂದಾಗಿರುವವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿರುವ ಕಾರಣ ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಲಾಕ್ ಡೌನ್ ಕಾರಣಕ್ಕೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮಾಡಿಕೊಳ್ಳಲಾಗಿರಲಿಲ್ಲ.

ಈಗ ಅಂತಹ ಸೇವೆಗಳ ಕುರಿತು ಕೆಲವೊಂದು ಸಡಿಲಿಕೆಗಳನ್ನು ಮಾಡಲಾಗುತ್ತಿದ್ದು, ಹೊಸದಾಗಿ ವಾಹನ ಚಾಲನಾ ಪರವಾನಿಗೆ ಪಡೆಯಲು ಅಥವಾ ಪರವಾನಿಗೆ ನವೀಕರಿಸುವುದು ಸೇರಿದಂತೆ ಕೆಲ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಕೇಂದ್ರ ಮೋಟಾರು ವಾಹನ ನಿಯಮಗಳು ಅಡಿಯಲ್ಲಿನ ಸೇವೆಗಳಿಗಾಗಿ ಅರ್ಜಿದಾರರು ಸಲ್ಲಿಸಿರುವ ಶುಲ್ಕ ಜುಲೈ 31 ರವರೆಗೆ ಮಾನ್ಯವಾಗಿದೆ ಎಂದು ತಿಳಿಸಲಾಗಿದ್ದು, ಜೊತೆಗೆ ಫೆಬ್ರವರಿ 1 ರ ಬಳಿಕ ಈ ಸೇವೆಗಳಿಗೆ ಅರ್ಜಿದಾರರು ಶುಲ್ಕ ಪಾವತಿಸಲು ಸಾಧ್ಯವಾಗದೇ ವಿಳಂಬವಾಗಿದ್ದರೂ ಅಂತಹ ಅರ್ಜಿದಾರರಿಗೆ ಜುಲೈ 31 ರವರೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...