alex Certify ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ. 40 ರಷ್ಟು ಜಿಗಿದಿರುವ ಕಾರಣ ಭಾರತದಲ್ಲಿ ಡೀಸೆಲ್ ಬೆಲೆಯನ್ನು ಬೃಹತ್ ಗ್ರಾಹಕರಿಗೆ ಲೀಟರ್‌ ಗೆ ಸುಮಾರು 25 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಆದರೆ, ಡೀಸೆಲ್ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮಾರ್ಚ್ 2022 ರಲ್ಲಿ ಪೆಟ್ರೋಲ್ ಪಂಪ್ ಮಾರಾಟ ಐದನೇ ಒಂದು ಭಾಗದಷ್ಟು ಹೆಚ್ಚಾಗಿದೆ. ಬಸ್ ಫ್ಲೀಟ್‌ ಗಳು ಮತ್ತು ಶಾಪಿಂಗ್ ಮಾಲ್‌ ಗಳ ನಿರ್ವಾಹಕರು, ಇತರರು ತೈಲ ಕಂಪನಿಗಳಿಂದ ನೇರವಾಗಿ ಆರ್ಡರ್ ಮಾಡುವ ಬದಲಿಗೆ ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ಖರೀದಿಸಿದ್ದಾರೆ. ಇದರ ಪರಿಣಾಮ ಖಾಸಗಿ ಚಿಲ್ಲರೆ ವ್ಯಾಪಾರಿಗಳಾದ Nayara Energy, Jio-bp ಮತ್ತು Shell ಕಂಪನಿಗಳಿಗೆ ನಷ್ಟವಾಗಿದೆ.

ಪಿಟಿಐ ವರದಿಯಲ್ಲಿ ಹೆಸರಿಸದ ಮೂಲಗಳ ಪ್ರಕಾರ, ಚಿಲ್ಲರೆ ವ್ಯಾಪಾರಿಗಳು ಈಗ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ದಾಖಲೆಯ 136 ದಿನಗಳವರೆಗೆ ಫ್ರೀಜ್‌ ನಲ್ಲಿರುವ ದರಗಳಲ್ಲಿ ಮಾರಾಟ ಮಾಡುವುದಕ್ಕಿಂತ ಪಂಪ್‌ ಗಳನ್ನು ಮುಚ್ಚುವುದು ಹೆಚ್ಚು ಕಾರ್ಯಸಾಧ್ಯವೆಂದು ಭಾವಿಸಿದ್ದಾರೆ.

ಬೃಹತ್ ಗ್ರಾಹಕರಿಗೆ ಡೀಸೆಲ್ ಬೆಲೆಯಲ್ಲಿ ಇತ್ತೀಚಿನ ಹೆಚ್ಚಳದೊಂದಿಗೆ, ಮುಂಬೈನಲ್ಲಿ ಒಂದು ಲೀಟರ್ ಇಂಧನ ಲೀಟರ್‌ಗೆ 122.05 ರೂ.ಗೆ ಮಾರಾಟವಾಗುತ್ತಿದೆ, ಹಿಂದಿನ ಬೆಲೆ 94.14 ರೂ.ಗಿಂತ 25 ರೂ. ಜಾಸ್ತಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ದರವನ್ನು 25 ರೂ. ಹೆಚ್ಚಳ ಮಾಡಿ 115 ರೂ.ಗೆ ಹೆಚ್ಚಿಸಲಾಗಿದೆ. ಸಾಮಾನ್ಯ ಬಳಕೆದಾರರಿಗೆ ಪೆಟ್ರೋಲ್ ಪಂಪ್‌ ನಲ್ಲಿ ಪ್ರಸ್ತುತ ಇಂಧನವನ್ನು ಲೀಟರ್‌ಗೆ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ತೈಲ ಮಾರುಕಟ್ಟೆ ಕಂಪನಿಗಳು ನವೆಂಬರ್ 4, 2022 ರಂದು ಕೊನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಿದ್ದವು. ಅಂದಿನಿಂದ, ಜಾಗತಿಕ ತೈಲ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದರೂ ಸಹ, ಇಂಧನ ದರಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ.

ಈ ಮೊದಲು, ಐದು ರಾಜ್ಯಗಳ ಚುನಾವಣೆಗಳ ಮತ ಎಣಿಕೆಯ ದಿನವಾದ ಮಾರ್ಚ್ 10  ರಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬದಲಾಯಿಸುವುದನ್ನು ಪುನರಾರಂಭಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...