alex Certify ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್‌ ಸುದ್ದಿ

ಕೊರೊನಾ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಉದ್ಯೋಗದಲ್ಲಿ ಸಮಸ್ಯೆ ಹೊಂದಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ.

ಕೇಂದ್ರ ಸರ್ಕಾರ, ಯೋಜನೆಯೊಂದರ ಸಹಾಯದಿಂದ ನೌಕರನಿಗೆ 24 ತಿಂಗಳವರೆಗೆ ಹಣ ನೀಡ್ತಿದೆ. ಮೋದಿ ಸರ್ಕಾರದ ಈ ಯೋಜನೆಯ ಹೆಸರು “ಅಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ್” ಯೋಜನೆ. ಈ ಯೋಜನೆಯಡಿಯಲ್ಲಿ ಕೆಲಸ ಕಳೆದುಕೊಂಡ ಅಥವಾ ಸಂಬಳ ಸಿಗದ ಉದ್ಯೋಗಿಗಳಿಗೆ ಸರ್ಕಾರ ಎರಡು ವರ್ಷಗಳವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.  ಈ ಆರ್ಥಿಕ ಸಹಾಯವನ್ನು ಪ್ರತಿ ತಿಂಗಳು ನೀಡಲಾಗುವುದು.

ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ನೀವು ಮೊದಲು ಇಎಸ್ಐಸಿ ವೆಬ್‌ಸೈಟ್‌ಗೆ ಹೋಗಿ ಅಟಲ್ ವಿಮೆ ಬಿಮಿಟ್ ಯೋಜನೆ ವ್ಯಕ್ತಿ ಕಲ್ಯಾಣ್ ಯೋಜನೆಯಲ್ಲಿ ಹೆಸರು ನೋಂದಾಯಿಸಿ. ತಪ್ಪು ನಡವಳಿಕೆಯಿಂದ ಕಂಪನಿಯಿಂದ ತೆಗೆದುಹಾಕಲ್ಪಟ್ಟ ಜನರಿಗೆ ಯೋಜನೆಯ ಲಾಭ ದೊರೆಯುವುದಿಲ್ಲ. ಕ್ರಿಮಿನಲ್ ಪ್ರಕರಣಗಳ ಅಥವಾ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವ ನೌಕರರು ಸಹ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...