ಕೊರೋನಾ ಭೀತಿ ನಡುವೆಯೂ ಸಾಲ ವಸೂಲಿಗೆ ಒತ್ತಡ ಹಾಕುತ್ತಿದ್ದು, ಇನ್ ಸ್ಟಂಟ್ ಲೋನ್ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ವಸೂಲಿಗೆ ಮುಂದಾಗಿವೆ ಎನ್ನಲಾಗಿದೆ.
ಆನ್ಲೈನ್, ಮೊಬೈಲ್ ಆಪ್ ಗಳ ಮೂಲಕ ಪಡೆದ ಪರ್ಸನಲ್ ಸಾಲಕ್ಕೆ ಶೇಕಡ 36 ರವರೆಗೂ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಸಾಲ ಮರು ಪಾವತಿಸುವಂತೆ ಕಂಪನಿಗಳು ಗ್ರಾಹಕರ ಬೆನ್ನು ಬಿದ್ದಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯನ್ವಯ ಮೂರು ತಿಂಗಳು ಸಾಲದ ಇಎಂಐ ಪಾವತಿಗೆ ಅವಕಾಶವಿದ್ದರೂ ಸಾಲ ವಸೂಲಿಗೆ ಬಲವಂತ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.