alex Certify ಮಾರ್ಚ್ 31ರೊಳಗಾಗಿ ಪೂರ್ಣಗೊಳಿಸಿ ಎಫ್​ಡಿ, ಜಿಎಸ್​ಟಿ, ಕೆಸಿಸಿ ಸಂಬಂಧಿ ಈ ಮುಖ್ಯ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 31ರೊಳಗಾಗಿ ಪೂರ್ಣಗೊಳಿಸಿ ಎಫ್​ಡಿ, ಜಿಎಸ್​ಟಿ, ಕೆಸಿಸಿ ಸಂಬಂಧಿ ಈ ಮುಖ್ಯ ಕೆಲಸ

ಏಪ್ರಿಲ್​ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಹೀಗಾಗಿ ನೀವು ಮಾರ್ಚ್​ 31ರೊಳಗಾಗಿ ಕೆಲ ಮುಖ್ಯ ಕೆಲಸಗಳನ್ನ ಮಾಡಿಕೊಳ್ಳಬೇಕಿದೆ.  ಇಲ್ಲವಾದಲ್ಲಿ ಮುಂದೆ ನಿಮಗೆ ಬಹಳ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದು ಮಾತ್ರವಲ್ಲದೇ ಹೊಸ ಆರ್ಥಿಕ ವರ್ಷದಿಂದ ಕೆಲ ಬದಲಾವಣೆಗಳೂ ಆಗೋದ್ರಿಂದ ಪಿಎನ್​ಬಿ, ಪಿಎಂ ಕಿಸಾನ್​ ಹಾಗೂ ವಿವಾದ್​ ಸೇ ವಿಶ್ವಾಸ್​ ಸ್ಕೀಮ್​ನಡಿಯಲ್ಲಿ ಮುಖ್ಯ ಕಾರ್ಯಗಳನ್ನ ಮಾಡಿಕೊಳ್ಳಲೇಬೇಕು.

1. ವಿವಾದ್​ ಸೇ ವಿಶ್ವಾಸ್​ ಸ್ಕೀಮ್​​ನ ಕೊನೆಯ ಅವಧಿ 31 ಮಾರ್ಚ್​ : ಕೇಂದ್ರ ಸರ್ಕಾರ ವಿವಾದದಿಂದ ವಿಶ್ವಾಸ್​ ಸ್ಕೀಮ್​​ನಡಿಯಲ್ಲಿ ಹಣ ಪಾವತಿಯ ಕೊನೆಯ ದಿನಾಂಕ 31 ಮಾರ್ಚ್ ಆಗಿದೆ. ಈ ಸ್ಕೀಮ್​ನ ಅಡಿಯಲ್ಲಿ ಸರ್ಕಾರ ತೆರಿಗೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ ಪಡುತ್ತಿದೆ.

2. ಪಿಎನ್​​ಬಿಯಿಂದಲೂ ಗ್ರಾಹಕರಿಗೆ ಅಲರ್ಟ್ ಸಂದೇಶ : ಪಿಎನ್​ಯಲ್ಲಿ ಓರಿಯಂಟಲ್​ ಬ್ಯಾಂಕ್​ ಆಫ್​ ಕಾಮರ್ಸ್ ಹಾಗೂ ಯುನೈಟೆಡ್​ ಬ್ಯಾಂಕ್​ ಆಫ್​ ಇಂಡಿಯಾ ಮರ್ಜರ್​ನ ಬಳಿಕ ಮಾರ್ಚ್​ 31ರಿಂದ ಹಳೆಯ ಐಎಫ್​ಎಸ್​ಸಿ ಕೋಡ್​ ಕೆಲಸ ಮಾಡೋದಿಲ್ಲ . ಇದರ ಜೊತೆಯಲ್ಲಿ ಒಬಿಸಿ, ಯುನೈಟೆಡ್​​​ ಬ್ಯಾಂಕ್​ ಆಫ್​ ಇಂಡಿಯಾದ ಪ್ರಸ್ತುತ ಇರುವ ಚೆಕ್​ಬುಕ್​​ ಕೂಡ ಕೇವಲ ಮಾರ್ಚ್​ 31ರವರೆಗೆ ಮಾತ್ರ ಕೆಲಸ ಮಾಡಲಿದೆ. ಏಪ್ರಿಲ್​ 1ರಿಂದ ಬ್ಯಾಂಕ್​ನಿಂದ ಹೊಸ ಚೆಕ್​ಬುಕ್​ಗಳನ್ನ ಪಡೆಯಬೇಕು ಎಂದು ಗ್ರಾಹಕರಿಗೆ ಸಂದೇಶ ರವಾನಿಸಲಾಗಿದೆ.

3. ಕಿಸಾನ್​ ಕ್ರೆಡಿಟ್​ ಕಾರ್ಡ್​:  ಕೇಂದ್ರ ಸರ್ಕಾರ ಕೆಸಿಸಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಡಿಜಿಟಲ್​ ಇಂಡಿಯಾ ಪರಿಕಲ್ಪನೆಯನ್ನ ಅಭಿವೃದ್ಧಿ ಮಾಡಲಿಕ್ಕೋಸ್ಕರ ಅಭಿಯಾನಗಳ ಮೂಲಕ ಕಿಸಾನ್​ ಕ್ರೆಡಿಟ್​ ಕಾರ್ಡ್​ನ್ನು ಮಾಡಿಸುತ್ತಿದೆ. ನೀವು ಕೂಡ ಸ್ಕೀಮ್​ನ ಲಾಭವನ್ನ ಪಡೆಯಲು ಇಚ್ಚಿಸುತ್ತೀರಾ ಅಂದ್ರೆ ಬ್ಯಾಂಕ್​ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ತುಂಬಿದ 15 ದಿನಗಳ ಬಳಿಕ ಕಿಸಾನ್ ಕಾರ್ಡ್​ ನಿಮ್ಮ ಕೈ ಸೇರಲಿದೆ.

4.ಕಡಿಮೆ ಬಡ್ಡಿದರದಲ್ಲಿ ಸಿಗಲಿದೆ ಗೃಹ ಸಾಲ ಸೌಲಭ್ಯ : ದೇಶದಲ್ಲಿ ಬಹುತೇಕ ಬ್ಯಾಂಕ್​ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸೌಲಭ್ಯ ನೀಡುತ್ತಿದೆ. ಕೋಟಕ್​ ಮಹೀಂದ್ರಾ ಬ್ಯಾಂಕ್​​ನಲ್ಲಿ ಮಾರ್ಚ್ 31ರವರೆಗೆ ಮಾತ್ರ ಈ ಆಫರ್​ ಇದೆ. ಮಾರ್ಚ್ 31ರ ಒಳಗಾಗಿ ಸಾಲ ಸೌಲಭ್ಯ ಪಡೆದವರಿಗೆ 6.65 ಶೇಕಡಾ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಇದರ ಜೊತೆಯಲ್ಲಿ ಹೆಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ ಬ್ಯಾಂಕ್​ ಕೂಡ ಗೃಹ ಸಾಲ ಸೌಲಭ್ಯ ನೀಡಿದೆ.

5. ಎಫ್​ಡಿಯಲ್ಲಿ ಹಿರಿಯ ನಾಗರಿಕರಿಗೆ ಸಿಗಲಿದೆ ಹೆಚ್ಚಿನ ಲಾಭ : ಬ್ಯಾಂಕ್​​ ಆಯ್ದ ಮೆಚ್ಯೂರಿಟಿ ಪಿರೀಯಡ್​​ ಸ್ಕೀಮ್​​ನಡಿಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ನೀಡಲಿದೆ. ಗ್ರಾಹಕರಿಗೆ 0.5 ಶೇಕಡಾ ಹೆಚ್ಚಿನ ಬಡ್ಡಿ ಸಿಗಲಿದೆ. ಇದಕ್ಕೂ ಕೂಡ ಡೆಡ್​ಲೈನ್​ ಮಾರ್ಚ್​ 31 ಆಗಿದೆ.  ಎಸ್​ಬಿಐ, ಹೆಚ್​ಡಿಎಫ್​ಸಿ, ಬ್ಯಾಂಕ್​ ಆಫ್​ ಬರೋಡಾ ಸೇರಿದಂತೆ ವಿವಿಧ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಈ ಆಫರ್​ ಸಿಗುತ್ತಿದೆ.

6. ಜಿಎಸ್​ಟಿ ರಿಟರ್ನ್​ ಫೈಲಿಂಗ್​ : ಸರ್ಕಾರ 2019-20ನೇ ಆರ್ಥಿಕ ವರ್ಷದಲ್ಲಿ ಜಿಎಸ್​ಟಿ ರಿಟರ್ನ್​ ದಾಖಲು ಮಾಡಲು ಮಾರ್ಚ್​ 31ರವರೆಗೆ ಅವಕಾಶ ನೀಡಿದೆ. ಹೀಗಾಗಿ ಮಾರ್ಚ್​ 31ರೊಳಗಾಗಿ ಜಿಎಸ್​ಟಿ ರಿಟರ್ನ್ ಪೂರ್ತಿ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...