alex Certify ‘ಕೊರೊನಾ’ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಕಂಪನಿಗಳ ಸಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಕಂಪನಿಗಳ ಸಾಥ್

ಕೊರೊನಾ ಎರಡನೇ ವಿರುದ್ಧ ನಡೆಯುತ್ತಿರುವ ದೇಶದ ಹೋರಾಟಕ್ಕೆ ಸ್ಮಾರ್ಟ್ ಫೋನ್​ ತಯಾರಕ ಕಂಪನಿಗಳಾದ ಒಪ್ಪೊ ಹಾಗೂ ವಿವೋ ಸಾಥ್​ ನೀಡಿವೆ. ದೇಶದಲ್ಲಿ ಉಂಟಾಗಿರುವ ಕೃತಕ ಆಮ್ಲಜನಕ ಕೊರತೆಯನ್ನ ನೀಗಿಸಲು ಸಹಾಯ ಮಾಡಿವೆ.

ದೇಶದಲ್ಲಿ ಆಮ್ಲಜನಕ ಕೊರತೆಯನ್ನ ಗಮನದಲ್ಲಿಟ್ಟುಕೊಂಡು ವಿವೋ ಇಂಡಿಯಾ 2 ಕೋಟಿ ರೂಪಾಯಿ ಹಣವನ್ನ ದೇಣಿಗೆಯ ರೂಪದಲ್ಲಿ ನೀಡಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ವಿವೋ ಇಂಡಿಯಾ ನಿರ್ದೇಶಕ ನಿಪುಣ್​ ಮರ್ಯಾ, ಈ ಹೋರಾಟದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಭಾರತದ ಹೋರಾಟಕ್ಕೆ ವಿವೋ ಕೂಡ ಸಾಥ್​ ನೀಡಿದೆ ಎಂದು ಹೇಳಿದ್ರು.

ಕಳೆದ ವರ್ಷ ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ವಿವೋ 9 ಲಕ್ಷ ಮಾಸ್ಕ್​, 15000 ಪಿಪಿಇ ಕಿಟ್​ ಹಾಗೂ 50 ಸಾವಿರ ಲೀಟರ್​ ಸ್ಯಾನಿಟೈಸರ್​ಗಳನ್ನ ದೇಣಿಗೆ ರೂಪದಲ್ಲಿ ನೀಡಿತ್ತು.

ಇದ್ದಕ್ಕಿದ್ದಂತೆ ಮನೆ ಗೋಡೆ ಮೇಲೆ ಮೂಡಿದ ಬಳಪದ ಕಲೆ..! ಚಿಂತಾಕ್ರಾಂತರಾದ ನಿವಾಸಿಗಳು

ಇನ್ನು ಕೋವಿಡ್​​ ವಿರುದ್ಧದ ಭಾರತದ ಹೋರಾಟಕ್ಕೆ ಸಾಥ್​ ನೀಡುವ ಸಲುವಾಗಿ ಭಾರತೀಯ ರೆಡ್ ಕ್ರಾಸ್​ ಸೊಸೈಟಿ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಒಪ್ಪೋ ಇಂಡಿಯಾ 4.3 ಕೋಟಿ ರೂಪಾಯಿ ಮೌಲ್ಯದ 1000 ಆಕ್ಸಿಜನಲ್​ ಹಾಗೂ 500 ಬ್ರೀದಿಂಗ್​ ಮಷಿನ್​ಗಳನ್ನ ನೀಡೋದಾಗಿ ಹೇಳಿದೆ.

ಇಷ್ಟು ಮಾತ್ರವಲ್ಲದೇ ಒಪ್ಪೊ ಕಂಪನಿ ದೆಹಲಿ ಪೊಲೀಸರು ಹಾಗೂ ಗ್ರೇಟರ್​ ನೋಯ್ಡಾ ಮುಂಚೂಣಿ ಕಾರ್ಯಕರ್ತರಿಗೆ ಒಟ್ಟು 1.5 ಕೋಟಿ ರೂಪಾಯಿ ಮೌಲ್ಯದ ಸ್ಮಾರ್ಟ್​ ಬ್ಯಾಂಡ್​​ಗಳನ್ನ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...