alex Certify ದೋಷಪೂರಿತ ಮೈಕ್ರೋವೇವ್​ ನೀಡಿದ ಕಂಪನಿಗೆ ದುಬಾರಿ ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೋಷಪೂರಿತ ಮೈಕ್ರೋವೇವ್​ ನೀಡಿದ ಕಂಪನಿಗೆ ದುಬಾರಿ ದಂಡ..!

ಗ್ರಾಹಕಿಗೆ ದೋಷಪೂರಿತ ಮೈಕ್ರೋವೇವ್​ ನೀಡಿದ ತಪ್ಪಿಗೆ ಅಂಗಡಿಗೆ ಗ್ರಾಹಕ ಸೇವಾ ಕೋರ್ಟ್​ ಒಂದು ಹೊಸ ಮೈಕ್ರೋವೇವ್​ ಹಾಗೂ 12 ಸಾವಿರ ರೂ. ಕೊಡುವಂತೆ ಆದೇಶ ನೀಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ.

ಸೋನಿಯಾ ಭಾಟಿಯಾ ಎಂಬವರು ಡಿಸೆಂಬರ್​ 2018ರಲ್ಲಿ 12,990 ರೂಪಾಯಿ ನೀಡಿ ಮೈಕ್ರೋವೇವ್​ ಖರೀದಿ ಮಾಡಿದ್ದರು. ಆದರೆ ಮೈಕ್ರೋವೇವ್ ಸರಿಯಾಗಿ ಕಾರ್ಯ ನಿರ್ವಾಹಿಸ್ತಾ ಇರಲಿಲ್ಲ . ಕೂಡಲೇ ಮ್ಯಾನೇಜರ್​ನ್ನು ಸಂಪರ್ಕಿಸಿದ ಸೋನಿಯಾ ಮೈಕ್ರೋವೇವ್​ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.

ಆದರೆ ದೂರನ್ನ ಸ್ವೀಕರಿಸಿದ ಮೈಕ್ರೋವೇವ್​ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಮಹಿಳೆ ಗ್ರಾಹಕ ಸೇವಾ ದಳಕ್ಕೆ ದೂರನ್ನ ಸಲ್ಲಿಸಿದ್ದರು. ದೂರಿನ ಸಂಬಂಧ ವಿಚಾರಣೆ ನಡೆಸಿದ ಗ್ರಾಹಕ ಸೇವಾ ಆಯೋಗ ಸೋನಿಯಾ ನೀಡಿದ ದೂರು ಸತ್ಯವಾಗಿದೆ ಎಂಬುದನ್ನ ಮನಗಂಡಿದೆ. ಹೀಗಾಗಿ ಮೈಕ್ರೋವೇವ್​​ ಕಂಪನಿಗೆ ಹೊಸ ಮೈಕ್ರೋವೇವ್​ ಹಾಗೂ ದಾವೆ ವೆಚ್ಚವಾಗಿ 7 ಸಾವಿರ ರೂ, ಹೆಚ್ಚುವರಿ ಪರಿಹಾರ 5 ಸಾವಿರ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...