alex Certify BIG NEWS: ಹಾನಿಗೊಳಗಾದ ಚಾರ್ಜರ್ ಗೆ ಪರಿಹಾರ ನೀಡದ ವಿಮೆ ಕಂಪನಿಗೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಾನಿಗೊಳಗಾದ ಚಾರ್ಜರ್ ಗೆ ಪರಿಹಾರ ನೀಡದ ವಿಮೆ ಕಂಪನಿಗೆ ದಂಡ

ಶಿವಮೊಗ್ಗ: ಹಾನಿಗೊಳಗಾದ ಚಾರ್ಜರ್ ಗೆ ವಿಮೆ ಪರಿಹಾರ ನೀಡದ ವಿಮೆ ಸಂಸ್ಥೆಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ.

ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್ ಚಾಲಿತ ಟಾಟಾ ಕಾರ್ ನ ವಿಮೆಯನ್ನು ದಿ:06/11/2022 ರಿಂದ ದಿ:05/10/2023ರ ಅವಧಿಗೆ ಮೆಚೋಲಮಂಡಲಮ್ ಜನರಲ್ ಇನ್ಸೂರೆನ್ಸ್ ಕಂಪನಿಯಿಂದ ಪಡೆದಿದ್ದಾರೆ. ದಿ: 29/11/2022 ರಂದು ತಮ್ಮ ಮನೆಯ ಪೋರ್ಟಿಕೋದಲ್ಲಿ ನಿಲ್ಲಿಸಿದ್ದ ಕಾರ್ಗೆ ವಿದ್ಯುತ್ ಚಾರ್ಜಿಂಗ್‍ಗಾಗಿ ಚಾರ್ಜರ್ ಅನ್ನು ಅಳವಡಿಸಿದ್ದು, ಆಕಸ್ಮಿಕದಿಂದ ವಿದ್ಯುತ್ ಚಾರ್ಜರ್ ಗೆ ಹಾನಿಯಾಗಿದೆ. ಈ ಬಗ್ಗೆ ವಿಮೆ ಪರಿಹಾರ ಕೋರಿ ಕಾರ್ ಮಾಲೀಕರು ಇನ್ಸೂರೆನ್ಸ್ ಕಂಪನಿಗೆ ಸಲ್ಲಿಸಿದ ಕ್ಲೈಂ ಅನ್ನು ಪುರಸ್ಕರಿಸದ ಕಾರಣ, ಇನ್ಸೂರೆನ್ಸ್ ಸಂಸ್ಥೆಯ ವಿರುದ್ಧ ಸೇವಾ ನ್ಯೂನ್ಯತೆ ಆರೋಪಿಸಿ ಮತ್ತು ಪರಿಹಾರ ಕೋರಿ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಎರಡೂ ಪಕ್ಷಗಾರರ ವಿಚಾರಣೆ ನಡೆಸಿದ ಆಯೋಗವು ಇನ್ಸೂರೆನ್ಸ್ ಕಂಪನಿ ವಿಮೆ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟ ಕಾರಣ ಮೆಟೋಲಮಂಡಲಮ್, ಜನರಲ್ ಇನ್ಸೂರೆನ್ಸ್ ಕಂಪನಿಯವರು ವಿದ್ಯುತ್ ಚಾರ್ಜರ್ ಮೊತ್ತ 34,840 ರೂ.ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 7% ರಂತೆ ಬಡ್ಡಿಯೊಂದಿಗೆ ಪಾವತಿಸಲು ಆದೇಶಿಸಿದೆ.

ದೂರುದಾರರಿಗೆ ಆದ ಮಾನಸಿಕ ಹಿಂಸೆಗಾಗಿ 10,000 ರೂ. ಮತ್ತು  ವ್ಯಾಜ್ಯ ವೆಚ್ಚವಾಗಿ 10,000 ರೂ.ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 10% ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ, ಬಿ. ಪಟ್ಟಣಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...