alex Certify ಹಾರ್ಟ್, ಶುಗರ್ ಪೇಷಂಟ್ ಗಳಿಗೆ ಇಲ್ಲಿದೆ ಗುಡ್ ನ್ಯೂಸ್: ಮಧುಮೇಹ, ಹೃದಯ ರಕ್ತನಾಳ, ಕಿಡ್ನಿ ಔಷಧಿಗಳ ಬೆಲೆ ಕಡಿತ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ಟ್, ಶುಗರ್ ಪೇಷಂಟ್ ಗಳಿಗೆ ಇಲ್ಲಿದೆ ಗುಡ್ ನ್ಯೂಸ್: ಮಧುಮೇಹ, ಹೃದಯ ರಕ್ತನಾಳ, ಕಿಡ್ನಿ ಔಷಧಿಗಳ ಬೆಲೆ ಕಡಿತ ಸಾಧ್ಯತೆ

ನವದೆಹಲಿ: ಮಧುಮೇಹ, ಹೃದಯರಕ್ತನಾಳ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ನಿರ್ಣಾಯಕ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಯೋಜಿಸುತ್ತಿದೆ.

ಕೇಂದ್ರವು ಶೀಘ್ರದಲ್ಲೇ ಹಲವಾರು ನಿರ್ಣಾಯಕ ಔಷಧಿಗಳ ಬೆಲೆ ಕಡಿತಗೊಳಿಸಲಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಔಷಧಗಳ ತಯಾರಕರು ಮತ್ತು ಫಾರ್ಮಾ ಕಂಪನಿಗಳಿಗೆ ಟ್ರೇಡ್ ಮಾರ್ಜಿನ್ ತಾರ್ಕಿಕೀಕರಣಕ್ಕೆ(rationalization) ಒಳಗಾಗುವ ಔಷಧಿಗಳ ದರ ಇಳಿಕೆಗೆ ಸೂಚಿಸಲಿದ್ದಾರೆ ಎನ್ನಲಾಗಿದೆ.

ನಿಗದಿತವಲ್ಲದ ಔಷಧಿಗಳ ಮೇಲಿನ ವ್ಯಾಪಾರದ ಮಾರ್ಜಿನ್ ಕುರಿತು ಸಚಿವರು ಜುಲೈ 26 ರಂದು ಉದ್ಯಮದವರನ್ನು ಭೇಟಿಯಾಗಲಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯಾಪಾರದ ಅಂಚುಗಳ ಪರಿಷ್ಕರಣೆಯು ನಿರ್ಣಾಯಕ ಔಷಧಿಗಳ ಬೆಲೆಗಳನ್ನು ತಗ್ಗಿಸುತ್ತದೆ. ಟ್ರೇಡ್ ಮಾರ್ಜಿನ್‌ಗಳು ತಯಾರಕರಿಗೆ ವ್ಯಾಪಾರ ಮಾಡುವ ಬೆಲೆ ಮತ್ತು ರೋಗಿಗಳಿಗೆ ಗರಿಷ್ಠ ಚಿಲ್ಲರೆ ಬೆಲೆಯ ನಡುವಿನ ವ್ಯತ್ಯಾಸವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಮಧುಮೇಹ, ಮತ್ತು ಹೃದಯರಕ್ತನಾಳದ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುವ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಔಷಧ ಬೆಲೆ ಇಳಿಕೆಯ ಬಗ್ಗೆ ಘೋಷಣೆ ಮಾಡಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ(ಎನ್‌.ಪಿ.ಪಿ.ಎ.) ಔಷಧ ಬೆಲೆ ನಿಗಾ ಸಂಸ್ಥೆಯು 2019 ರಲ್ಲಿ 42 ಆಯ್ದ ನಿಗದಿತ ಕ್ಯಾನ್ಸರ್ ವಿರೋಧಿ ಔಷಧಿಗಳ ವ್ಯಾಪಾರದ ಮಾರ್ಜಿನ್ ಮೇಲೆ ಮಿತಿ ಹಾಕಿದೆ. ಈ ಕ್ರಮವು 526 ಬ್ರಾಂಡ್‌ ಗಳ ಈ ಔಷಧಿಗಳ MRP ಅನ್ನು 90 ಪ್ರತಿಶತದವರೆಗೆ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಮಾಂಡವಿಯಾ ಲೋಕಸಭೆಗೆ ತಿಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...