alex Certify ಶೇ. 7.25 ರಷ್ಟು ಬಡ್ಡಿಯ ಹೊಸ ಠೇವಣಿ ಯೋಜನೆ ಆರಂಭಿಸಿದ ಕೆನರಾ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ. 7.25 ರಷ್ಟು ಬಡ್ಡಿಯ ಹೊಸ ಠೇವಣಿ ಯೋಜನೆ ಆರಂಭಿಸಿದ ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 400 ದಿನಗಳ ಹೊಸ ಠೇವಣಿ ಯೋಜನೆಗಳನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.

ಶೇಕಡ 7.15 ರಷ್ಟು ಬಡ್ಡಿ ದರದ ಯೋಜನೆಯಡಿ 25,000 ರೂ.ನಿಂದ 2 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಅವಧಿಗೆ ಮೊದಲು ಠೇವಣಿ ಹಿಂಪಡೆಯುವುದು ಅಥವಾ ಠೇವಣಿಯ ಒಂದಿಷ್ಟು ಪಾಲನ್ನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.

ಅವಧಿಗೆ ಮೊದಲು ಠೇವಣಿ ಹಣ ಹಿಂಪಡೆಯಲು, ಒಂದಿಷ್ಟು ಪಾಲನ್ನು ಹಿಂಪಡೆಯಲು ಅವಕಾಶ ಇಲ್ಲದ ಯೋಜನೆ ಅಡಿ 15 ಲಕ್ಷ ರೂ.ನಿಂದ 2 ಕೋಟಿ ಇರುವವರೆಗೆ ಹಣ ಹೂಡಿಕೆ ಮಾಡಬಹುದಾಗಿದ್ದು, ಇದಕ್ಕೆ ಶೇಕಡ 7.25 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡ 0.50 ರಷ್ಟು ಬಡ್ಡಿ ನೀಡಲಾಗುವುದು ಎಂದೂ ಕೆನರಾ ಬ್ಯಾಂಕ್ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...