alex Certify ಭಾರತದ ಈ ದಿಗ್ಗಜ ಕೈಗಾರಿಕೋದ್ಯಮಿ ಯಾರೆಂದು ಗುರುತಿಸಬಲ್ಲಿರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ದಿಗ್ಗಜ ಕೈಗಾರಿಕೋದ್ಯಮಿ ಯಾರೆಂದು ಗುರುತಿಸಬಲ್ಲಿರಾ..?

ಐಪಿಎಸ್ ಅಧಿಕಾರಿಯೊಬ್ಬರು ಬುಧವಾರ ಬೆಳಗ್ಗೆ ಟ್ವಿಟರ್‌ ನಲ್ಲಿ ಅಪ್‌ಲೋಡ್ ಮಾಡಿದ ಫೋಟೋವೊಂದಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದು, 1,100ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

ದೀಪಾಂಶು ಕಬ್ರಾ ಎಂಬ ಐಪಿಎಸ್ ಅಧಿಕಾರಿ ಯುವಕನೊಬ್ಬನ ಫೋಟೋವನ್ನು ಟ್ವಿಟರ್ ‌ನಲ್ಲಿ ಅಪ್‌ಲೋಡ್ ಮಾಡಿ, “ಭಾರತದ ಈ ದಿಗ್ಗಜ ಯಾರು ಎಂದು ಗುರುತಿಸಬಲ್ಲಿರಾ..?” ಎಂದು ಪ್ರಶ್ನೆ ಕೇಳಿದ್ದಾರೆ.

ಉದ್ಯಮ ಕ್ಷೇತ್ರದ ಅಧಿಪತಿ ರತನ್ ಟಾಟಾ ಎಂದು ಬಹುತೇಕ ಜನರು ಸರಿ ಉತ್ತರ ನೀಡಿದ್ದಾರೆ. ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರವಿಂದ ಎಂಬುವವರು ‘ನಾನು ಅವರನ್ನು ತುಂಬಾ ವರ್ಷದ ಹಿಂದೆ ಬಾಂಬೆ ಹೌಸ್‌ನಲ್ಲಿ ನೋಡಿದ್ದೆ. ಟಾಟಾ ಗ್ರೂಪ್ ಕಂಪನಿಯ ಐಪಿಎಲ್‌ಗೆ ನಾನು ಅಂತಿಮ ಇಂಟರ್ವ್ಯೂಗಾಗಿ ತೆರಳಿದ್ದೆ. ನಾನು ಆಯ್ಕೆ ಕೂಡ ಆದೆ. ಟಾಟಾ ಗ್ರೂಪ್ ಎಂಬುದು ಅದ್ಬುತ ಕಂಪನಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ರತನ್ ಟಾಟಾ ಅವರದ್ದು ಪರೋಪಕಾರದ ವ್ಯಕ್ತಿತ್ವ. ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರು. 1990 ರಿಂದ 2012 ರವರೆಗೆ ಅವರು ಟಾಟಾ ಗ್ರೂಪ್ಸ್‌ನ ಚೇರ್‌ಮನ್ ಆಗಿದ್ದರು. ನಂತರ ಎರಡನೇ ಬಾರಿ ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರ ಅವಧಿಗೆ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...