alex Certify BIG NEWS: ಚೀನಾಕ್ಕೆ ಇನ್ನೊಂದು ಟಕ್ಕರ್ ನೀಡಲಿದೆ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೀನಾಕ್ಕೆ ಇನ್ನೊಂದು ಟಕ್ಕರ್ ನೀಡಲಿದೆ ಭಾರತ

ಕೊರೊನಾ ವೈರಸ್, ಚೀನಾ ಮಧ್ಯೆ ನಡೆಯುತ್ತಿರುವ ವಿವಾದದ ನಡುವೆ ಭಾರತದಲ್ಲಿ ಹಬ್ಬದ ಋತು ಶುರುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ದೇಶದಲ್ಲಿ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಚೀನಾ ವಸ್ತುಗಳ ಬದಲು ಈ ಬಾರಿ ದೇಶಿ ವಸ್ತುಗಳು ರಾರಾಜಿಸಲಿವೆ.

ಸಿಎಐಟಿ ಆಗಸ್ಟ್ 3 ರಿಂದ ದೆಹಲಿ ಸೇರಿದಂತೆ ದೇಶದ ಎಲ್ಲಾ ವ್ಯಾಪಾರಿ ಸಂಸ್ಥೆಗಳಿಗೆ ಸಂದೇಶ ಕಳುಹಿಸಿದೆ. ರಾಖಿ ಹಬ್ಬದಿಂದ ನವೆಂಬರ್ 25 ರವರೆಗೆ ಭಾರತೀಯ ಉತ್ಪನ್ನಗಳನ್ನು ದೇಶದಲ್ಲಿ ಒದಗಿಸುವಂತೆ ಸೂಚನೆ ನೀಡಲಾಗಿದೆ. ಭಾರತೀಯ ವಸ್ತುಗಳನ್ನು ಖರೀದಿಸಲು ಯಾವುದೇ ತೊಂದರೆಯಾಗದಿರಲಿದೆ ಎಂದು ಈ ಸೂಚನೆ ನೀಡಲಾಗಿದೆ.

ರಾಖಿ, ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ನವರಾತ್ರಿ, ದೀಪಾವಳಿ ಸೇರಿದಂತೆ ಒಂದಾದ ಮೇಲೆ ಒಂದು ಹಬ್ಬ ಬರ್ತಿದ್ದು ಎಲ್ಲ ಹಬ್ಬಗಳಲ್ಲಿ ಇನ್ಮುಂದೆ ಭಾರತೀಯ ವಸ್ತುಗಳು ರಾರಾಜಿಸಲಿವೆ. ಇದಕ್ಕೆ ಪಟ್ಟಿ ಸಿದ್ಧವಾಗ್ತಿದೆ. ಜುಲೈ 11ರಂದು ಪಟ್ಟಿ ಪೂರ್ಣಗೊಳ್ಳಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...