alex Certify ಈ ಸ್ಟಾರ್ಟ್ ಅಪ್ ಐಡಿಯಾದಿಂದ ಗಳಿಸಿ ಲಕ್ಷಾಂತರ ರೂ. ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸ್ಟಾರ್ಟ್ ಅಪ್ ಐಡಿಯಾದಿಂದ ಗಳಿಸಿ ಲಕ್ಷಾಂತರ ರೂ. ಹಣ

ಕೊರೊನಾ ಅನೇಕರ ಪ್ರಾಣ ತೆಗೆದಿದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ಕೊರೊನಾ ಸಂಬಂಧ, ವ್ಯವಹಾರದಲ್ಲಿ ಬದಲಾವಣೆ ತಂದಿದೆ. ಸದಾ ನೌಕರಿ ಕನಸು ಕಾಣ್ತಿದ್ದ ಜನರು ಈಗ ಸ್ವಂತ ಉದ್ಯೋಗದ ಬಗ್ಗೆ ಆಲೋಚನೆ ಮಾಡ್ತಿದ್ದಾರೆ. ಮನೆಯಲ್ಲಿ ಕುಳಿತುಕೊಂಡಿರುವ ಯುವಕರು ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ. ಅಂತವರಿಗೆ ಕೆಲವೊಂದು ಮಹತ್ವದ ಮಾಹಿತಿ ಇಲ್ಲಿದೆ.

ಕೊರೊನಾ ಶಿಕ್ಷಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ಕೊರೊನಾದಿಂದಾಗಿ ಆನ್ಲೈ ಶಿಕ್ಷಣಕ್ಕೆ ಒತ್ತು ಸಿಕ್ಕಿದೆ. ಈ ಸಂದರ್ಭದಲ್ಲಿ ಜಾಹೀರಾತು ತಂತ್ರಜ್ಞಾನ ಕ್ಷೇತ್ರದಲ್ಲಿ ಶೀಘ್ರ ಏರಿಕೆ ಕಂಡುಬಂದಿದೆ.

ಬೈ ಜು ನಿಂದ ಅಕಾಡೆಮಿಕ್ ವರೆಗೆ ನೂರಾರು ಪ್ಲಾಟ್‌ಫಾರ್ಮ್‌ಗಳು ವೇಗವಾಗಿ ಬೆಳೆದಿವೆ. ಇದ್ರಲ್ಲಿ ನೀವು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ನೀವು ಶಾಲೆ-ಕಾಲೇಜು ಶಿಕ್ಷಣ ನೀಡುವ ಫ್ಲಾಟ್ಫಾರ್ಮ್ ತೆರೆಯಬೇಕಾಗಿಲ್ಲ. ನಿಮ್ಮ ಕೌಶಲ್ಯವನ್ನು ಬಳಸಿಕೊಂಡು ಆ ದಾರಿಯಲ್ಲಿ ಸಾಗಬೇಕು. ಭಾಷಾ ಕಲಿಕೆ, ವ್ಯಕ್ತಿತ್ವ ವಿಕಸನ, ಮಾರ್ಕೆಟಿಂಗ್ ಕೌಶಲ್ಯಗಳನ್ನು ಹೆಚ್ಚಿಸಲು ಆನ್‌ಲೈನ್ ಕೌಶಲ್ಯವನ್ನು ಕಲಿಸಬಹುದು. ಸಂಗೀತ, ನೃತ್ಯ, ಫಿಟ್ನೆಸ್ ತರಬೇತಿ ಸೇರಿದಂತೆ ಮನರಂಜನೆ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದೆ.

ಇನ್ನೊಂದು ವೈಯಕ್ತಿಕ ಹಣಕಾಸು. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಜನರು ಹಣ ಸಂಪಾದಿಸುವ ಜೊತೆಗೆ ಉಳಿಸುವ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡ್ತಾರೆ. ಕಿರಿಯರು ಮಾತ್ರವಲ್ಲ ಹಿರಿಯರೂ ಇದ್ರಲ್ಲಿ ಆಸಕ್ತಿ ತೋರುತ್ತಾರೆ. ಜನರಿಗೆ ಹಣ ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ವೇದಿಕೆಯನ್ನು ನೀವು ಶುರು ಮಾಡಬಹುದು.

ಕಂಟೆಂಟ್ ಕ್ರಿಯೇಟರ್ ಆಗಿಯೂ ಕೆಲಸ ಮಾಡಬಹುದು. ಯುಟ್ಯೂಬ್ ಸಿದ್ಧಪಡಿಸಲು ಸಾಧ್ಯವಿಲ್ಲ. ಆದ್ರೆ ಯುಟ್ಯೂಬ್ ನಲ್ಲಿ ನಾವು ಕಂಟೆಂಟ್ ರಚಿಸಬಹುದು. ನಿಮಗೆ ಇಷ್ಟವಿರುವ, ತಿಳಿದಿರುವ ವಿಷ್ಯಗಳನ್ನು ಯುಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಾಕಬಹುದು. ಆರಂಭದಲ್ಲಿ ಸಮಸ್ಯೆಯಾಗಬಹುದು.

ಗೇಮಿಂಗ್, ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಉದ್ಯಮವಾಗಿದೆ. ಭಾರತದ ಪ್ಲೇಸ್ಟೋರ್‌ನಲ್ಲಿ ಅತಿದೊಡ್ಡ ಆನ್‌ಲೈನ್ ಆಟವೆಂದರೆ ಲುಡೋ. ಇದು ಬಾಲ್ಯದಲ್ಲಿ ಆಡಿದ ಆಟವಾದ್ರೂ ಈಗ ಹೆಚ್ಚು ಪ್ರಸಿದ್ಧಿ ಪಡೆದಿದೆ. ಗೇಮಿಂಗ್ ಮೇಲೂ ನೀವು ಕೆಲಸ ಮಾಡಬಹುದು. ಯೂಟ್ಯೂಬ್‌ನಲ್ಲಿ ಗೇಮಿಂಗ್ ವಿಮರ್ಶೆಯಿಂದಲೂ ನೀವು ಸಾವಿರಾರು ರೂಪಾಯಿ ಸಂಪಾದಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...