alex Certify BIG BREAKING: ಸಚಿನ್, ಅಂಬಾನಿ, ಜಾಕಿಶ್ರಾಫ್ ಗೆ ಬಿಗ್ ಶಾಕ್; ‘ಪಂಡೋರಾ ಪೇಪರ್ಸ್’ ಪ್ರಕರಣ ಉನ್ನತ ‘ತನಿಖೆ’ಗೆ ವಹಿಸಿದ ‘ಸರ್ಕಾರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಚಿನ್, ಅಂಬಾನಿ, ಜಾಕಿಶ್ರಾಫ್ ಗೆ ಬಿಗ್ ಶಾಕ್; ‘ಪಂಡೋರಾ ಪೇಪರ್ಸ್’ ಪ್ರಕರಣ ಉನ್ನತ ‘ತನಿಖೆ’ಗೆ ವಹಿಸಿದ ‘ಸರ್ಕಾರ’

ನವದೆಹಲಿ: ‘ಪಂಡೋರಾ ಪೇಪರ್ಸ್ ಪ್ರಕರಣವನ್ನು ಸರ್ಕಾರ ತನಿಖೆ ಮಾಡಲಿದೆ. ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ಮಲ್ಟಿ ಏಜೆನ್ಸಿ ಗ್ರೂಪ್ ತನಿಖೆ ಕೈಗೊಳ್ಳಲಿದೆ.

‘ಪಂಡೋರಾ ಪೇಪರ್ಸ್’ ಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲಾಗುವುದು ಎಂದು ಸಿಬಿಡಿಟಿ ಅಧಿಕೃತ ವಕ್ತಾರರಯ ಹೇಳಿದ್ದಾರೆ.

ಸಿಬಿಡಿಟಿ, ಜಾರಿ ನಿರ್ದೇಶನಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಗುಪ್ತಚರ ಘಟಕದ ಪ್ರತಿನಿಧಿಗಳನ್ನು ಹೊಂದಿರುವ ಸಿಬಿಡಿಟಿ ಅಧ್ಯಕ್ಷರ ನೇತೃತ್ವದಲ್ಲಿ ಪಂಡೋರಾ ಪೇಪರ್ಸ್ ಸೋರಿಕೆ ಪ್ರಕರಣಗಳ ತನಿಖೆ ನಡೆಸುವಂತೆ ಸರ್ಕಾರ ನಿರ್ದೇಶಿಸಿದೆ ಎಂದು ವರದಿಯಾಗಿದೆ.

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ಅನಿಲ್ ಅಂಬಾನಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ, ನಟ ಜಾಕಿಶ್ರಾಫ್ ಸೇರಿ ಅನೇಕರ ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆ.

ಪಂಡೋರಾ ಪೇಪರ್ಸ್ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿ ಸಾವಿರಾರು ಶ್ರೀಮಂತರು ವಿದೇಶದಲ್ಲಿ ಕಂಪನಿಗಳನ್ನು ಆರಂಭಿಸಿದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ, ಈಕ್ವೆಡಾರ್ ರಾಷ್ಟ್ರಪತಿ, ಜೋರ್ಡಾನ್ ರಾಜ ಸೇರಿದಂತೆ ಅನೇಕರ ಮಾಹಿತಿ ಇದ್ದು, 300 ಭಾರತೀಯರ ಮಾಹಿತಿ ಕೂಡ ಇದೆ.

ಸಚಿನ್ ತೆಂಡೂಲ್ಕರ್ ವಿದೇಶದಲ್ಲಿನ ತಮ್ಮ ಆಸ್ತಿಯನ್ನು ನಗದೀಕರಣ ಮಾಡಲು 2016ರಲ್ಲಿ ಪನಾಮ ಪೇಪರ್ ಬಹಿರಂಗವಾದ ನಂತರ ಮನವಿ ಮಾಡಿದ್ದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ದಿವಾಳಿ ಎಂದು ಘೋಷಿಸಲಾದ ಉದ್ಯಮಿ ಅನಿಲ್ ಅಂಬಾನಿ ತೆರಿಗೆ ವಂಚನೆಗೆ ನೆರವಾಗುವ ದೇಶಗಳಲ್ಲಿ 18 ಕಂಪನಿಗಳನ್ನು ಹೊಂದಿರುವುದಾಗಿ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...