alex Certify ಸಿನಿ ಪ್ರಿಯರಿಗೆ ಗುಡ್ ನ್ಯೂಸ್: ಬುಕ್ ಮೈ ಶೋನಲ್ಲೂ ವೀಕ್ಷಿಸಬಹುದು ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿ ಪ್ರಿಯರಿಗೆ ಗುಡ್ ನ್ಯೂಸ್: ಬುಕ್ ಮೈ ಶೋನಲ್ಲೂ ವೀಕ್ಷಿಸಬಹುದು ಸಿನಿಮಾ

ಆನ್ಲೈನ್ ಸಿನಿಮಾ ಟಿಕೆಟ್ ಬುಕ್ಕಿಂಗ್ ವೇದಿಕೆ ಬುಕ್ ಮೈ ಶೋ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಬುಕ್ ಮೈ ಶೋ ತನ್ನ ಸ್ಟ್ರೀಮ್ ಸೇವೆಯನ್ನು ಮತ್ತೆ ಶುರು ಮಾಡಿದೆ. ಇಷ್ಟೇ ಅಲ್ಲ ಇನ್ಮುಂದೆ ಪ್ರೇಕ್ಷಕರು ಬುಕ್ ಮೈ ಶೋ ಮೂಲಕ ಆನ್ಲೈನ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದು.

ಕಂಪನಿ 600ಕ್ಕೂ ಹೆಚ್ಚು ಸಿನಿಮಾ, 72 ಸಾವಿರಕ್ಕಿಂತ ಹೆಚ್ಚು ಕಂಟೆಂಟ್ ನೀಡ್ತಿದೆ. ಬಳಕೆದಾರರು ಬುಕ್ ‌ಮೈ ಶೋ ಸ್ಟ್ರೀಮ್‌ನಲ್ಲಿ ಚಲನಚಿತ್ರವನ್ನು ಬಾಡಿಗೆಗೆ ಪಡೆಯಬಹುದು. ಇಲ್ಲವೆ ಚಂದಾದಾರಿಕೆಯನ್ನು ಪಡೆಯಬಹುದು. ಕೆಟಗರಿ ಪ್ರಕಾರ ಶುಲ್ಕ ಬದಲಾಗುತ್ತದೆ. ಅದು 40 ರೂಪಾಯಿಯಿಂದ 700 ರೂಪಾಯಿಗಳವರೆಗೆ ಇರುತ್ತದೆ.

ಬುಕ್ ಮೈ ಶೋ ಸ್ಟ್ರೀಮ್ ಸೇವೆಯಲ್ಲಿ ಪ್ರಪಂಚದ ಎಲ್ಲ ಕೆಟಗರಿಯ ಸಿನಿಮಾಗಳು ಸಿಗಲಿವೆ. ಈ ಲೈಬ್ರರಿಯಲ್ಲಿ 22 ಸಾವಿರ ಸಿನಿಮಾಗಳು ಸಿಗಲಿವೆ. ಆನ್ಲೈನ್ ನಲ್ಲಿ ಬುಕ್ ಮೈ ಶೋ ಮೂಲಕ ಸಂಗೀತ, ಹಾಸ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಹಾಲಿವುಡ್ ನ ಅತ್ಯುತ್ತಮ ಚಿತ್ರಗಳನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...