alex Certify ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ

ಬ್ಯಾಂಕ್​ ಆಫ್​ ಇಂಡಿಯಾ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​ ಒಂದನ್ನ ನೀಡಿದೆ. ಆಫೀಸ್​ ಅಸಿಸ್ಟಂಟ್​, ಅಟೆಂಡೆಂಡ್​, ವಾಚ್​ಮನ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಬ್ಯಾಂಕ್​ ಆಫ್​ ಇಂಡಿಯಾ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಕೃಷಿ ಹಣಕಾಸು ಇಲಾಖೆಯಲ್ಲಿ ಬಾರಸತ್​ ಹಾಗೂ ಕೋಲ್ಕತ್ತಾ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಸಹಾಯಕ ಸಿಬ್ಬಂದಿ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.

ಈ ಅಧಿಸೂಚನೆಯ ಪ್ರಕಾರ ಆರ್​ಎಸ್​ಓಟಿಐ, ಬಾರಾಸಾತ್​ ಕಚೇರಿಯಲ್ಲಿ ಅಸಿಸ್ಟಂಟ್​, ಅಟೆಂಡೆಂಟ್​, ವಾಚ್​ಮ್ಯಾನ್ ಹಾಗೂ ಫ್ಯಾಕಲ್ಟಿಯ ಹುದ್ದೆ ಭರ್ತಿ ಗುತ್ತಿಗೆ ರೂಪದಲ್ಲಿ ನಡೆಯಲಿದೆ. ಈ ಗುತ್ತಿಗೆ ಅವಧಿ 2 ವರ್ಷ ಇರಲಿದೆ. ಬ್ಯಾಂಕ್​ ತನ್ನ ಅವಶ್ಯಕತೆಗೆ ಅನುಸಾರ ಈ ಅವಧಿಯನ್ನ ಹೆಚ್ಚು ಮಾಡಲೂಬಹುದಾಗಿದೆ.

ಆಫೀಸ್​ ಅಸಿಸ್ಟೆಂಟ್​ – 2 ಹುದ್ದೆ, ಅಟೆಂಡೆಂಟ್​ – 2 ಹುದ್ದೆ, ವಾಚ್​ಮನ್​ – 1 ಹುದ್ದೆ, ಫ್ಯಾಕಲ್ಟಿ – 1 ಹುದ್ದೆಗೆ ಬ್ಯಾಂಕ್​ ಆಫ್​ ಇಂಡಿಯಾ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಾಗೂ 22 ಮಾರ್ಚ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ʼಆಧಾರ್ʼ‌ ನೆರವಿನಿಂದ ಮನೆಯಲ್ಲೇ ಕುಳಿತು ಮಾಡಬಹುದು ಈ ಎಲ್ಲ ಕೆಲಸ

ಆಫೀಸ್​ ಅಸಿಸ್ಟಂಟ್​ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಟ ವಿದ್ಯಾರ್ಹತೆ 10ನೇ ತರಗತಿ ಆಗಿದೆ. ವ್ಯಾಚ್​ಮನ್​​ ಹುದ್ದೆಗೆ 8ನೇ ತರಗತಿ ಪಾಸ್​ ಆದವರು ಅರ್ಜಿ ಸಲ್ಲಿಕೆ ಮಾಡಬಹುದು. ಫ್ಯಾಕಲ್ಟಿ ಹಾಗೂ ಅಟೆಂಡೆಂಟ್​ ಹುದ್ದೆಗೆ ಯಾವುದಾದರೂ ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದಿರಬೇಕು ಎಂದು ಬ್ಯಾಂಕ್​ ಹೇಳಿದೆ.

ವಯಸ್ಸಿನ ಮಿತಿ : (1 ಜನವರಿ 2021ಕ್ಕೆ ಅನ್ವಯವಾಗುವಂತೆ)

1.ಫ್ಯಾಕಲ್ಟಿ : 25 ರಿಂದ 65 ವರ್ಷ

2. ಕಾರ್ಯಾಲಯ ಸಹಾಯಕ : 18 ರಿಂದ 45 ವರ್ಷ

3. ಅಟೆಂಡೆಂಟ್​ – 18 ರಿಂದ 65 ವರ್ಷ

4. ವಾಚ್​​ಮನ್​ – 18 ರಿಂದ 65 ರ್ಷ

ಬ್ಯಾಂಕ್​ ಆಫ್​ ಬರೋಡಾದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ bankofindia.co.inನಲ್ಲಿ ಲಭ್ಯವಿರುವ ಅರ್ಜಿಯನ್ನ ಭರ್ತಿ ಮಾಡಬೇಕು. ಹಾಗೂ ಅರ್ಜಿ ತುಂಬುವ ವೇಳೆ ಕೇಳಲಾಗುವ ದಾಖಲೆಗಳನ್ನ ಸಲ್ಲಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...