ಬಿಎಂಡಬ್ಲೂ ಭಾರತದಲ್ಲಿ ಆಲ್ ನ್ಯೂ ಬಿಎಂಡಬ್ಲೂ ಎಂ 1000 ಆರ್ ಆರ್ ಎಂಬ ಎಂ ಮಾಡೆಲ್ನ ಮೊದಲ ಶ್ರೇಣಿಯ ಬೈಕ್ನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಬೈಕ್ನ ಬೆಲೆ 42 ಲಕ್ಷ ರೂಪಾಯಿಯಾಗಿದ್ದು, ಆನ್ ರೋಡ್ ಬೆಲೆ 45 ಲಕ್ಷ ರೂಪಾಯಿ ಆಗಲಿದೆ ಎಂದು ಕಂಪನಿ ಹೇಳಿದೆ.
ಬಿಎಂಡಬ್ಲೂ ಎಂ 1000 ಆರ್ ಆರ್ ಬೈಕ್ ತಿಳಿ ಬಿಳಿ ಬಣ್ಣ , ರೇಸಿಂಗ್ ಬ್ಲೂ ಮೆಟಾಲಿಗ್ ಹಾಗೂ ಕೆಂಪು ಬಣ್ಣದಲ್ಲಿ ಲಭ್ಯವಿದೆ.
ಬಿಎಂಡಬ್ಲೂ ಎಂ 1000 ಆರ್ ಆರ್ ಬೈಕ್ ಇದು ಬಿಎಂಡಬ್ಲೂನ ಮೊದಲ ಎಂ ಮಾಡೆಲ್ ಆಗಿದೆ.
ಎಂ ಆರ್ ಆರ್ನಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಹೆಡ್ಲೈಟ್ಗಳು ಹಾಗೂ ಅಸಿಮೆಟ್ರಿಕಲ್ ಕಲರ್ ಅರೆಂಜ್ಮೆಂಟ್ ಹಾಗೂ ಬಹು ಕಾರ್ಯ ನಿರ್ವಹಿಸಬಲ್ಲ ಇನ್ಸ್ಟ್ರುಮೆಂಟ್ ಪ್ಯಾನೆಲ್ ಅಳವಡಿಸಲಾಗಿದೆ.
ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ ನೀಡಿದ ಅರ್ಥ
ಬಿಎಂಡಬ್ಲೂ ಎಂ 1000 ಆರ್ ಆರ್ ಬೈಕ್ನಲ್ಲಿ 4 ಆಯಿಲ್ ಕೂಲ್ಡ್ ಸಿಲಿಂಡರ್ ಇನ್ ಲೈನ್ ಇಂಜಿನ್ ಇದೆ. ಇದೊಂದು ಅತ್ಯುತ್ತಮ ರೇಸಿಂಗ್ ಇಂಜಿನ್ ಆಗಿದೆ. ಈ ಬೈಕ್ನಲ್ಲಿ ನೀವು ಗಂಟೆಗೆ 306 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಬಹುದಾಗಿದೆ.