alex Certify BIG NEWS: ಲಾಕ್ ಡೌನ್ ನಂತ್ರ ಬ್ಯಾಂಕ್ ಮುಂದೆ Q ತಪ್ಪಿಸಲು ಜಾರಿಗೆ ಬಂದಿದೆ ಈ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ನಂತ್ರ ಬ್ಯಾಂಕ್ ಮುಂದೆ Q ತಪ್ಪಿಸಲು ಜಾರಿಗೆ ಬಂದಿದೆ ಈ ಸೌಲಭ್ಯ

ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಎಚ್ಚರಿಕೆ ಬಹಳ ಮುಖ್ಯ. ಇದಕ್ಕಾಗಿಯೇ ದೇಶದ ಎಲ್ಲಾ ಬ್ಯಾಂಕುಗಳು ಇದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿವೆ. ಈ ಮಧ್ಯೆ ಹರಿಯಾಣ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಜನರು ತಮ್ಮ ಬ್ಯಾಂಕಿನಲ್ಲಿ ಸಮಯದ ಸ್ಲಾಟ್ ಅನ್ನು ಮನೆಯಿಂದಲೇ ಕಾಯ್ದಿರಿಸಬಹುದು.

ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಲು ಮತ್ತು ಹಿಂಪಡೆಯಲು ಇದನ್ನು ಬಳಸಬಹುದು. ದೇಶದ ಇತರ ರಾಜ್ಯಗಳಲ್ಲೂ ಇದೇ ರೀತಿಯ ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಪೋಸ್ಟ್ ಆಫೀಸ್, ಬ್ಯಾಂಕ್ ಸೇವೆಯ ಮೂಲಕ ನಗದು ವಿತರಣೆಯ ಸೌಲಭ್ಯದ ಲಾಭವನ್ನು ನೀವು ಪಡೆಯಬಹುದು. ಇದಕ್ಕಾಗಿ ಹರಿಯಾಣ ಸರ್ಕಾರದ ಹಣಕಾಸು ಇಲಾಖೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ ನೊಂದಿಗೆ ಕೈಜೋಡಿಸಿದೆ.

https://bankslot.haryana.gov.in ನಲ್ಲಿ ಲಾಗ್ ಇನ್ ಆಗಬೇಕು. ಅಲ್ಲಿ ಯಾವಾಗ? ಯಾವ ಬ್ಯಾಂಕ್ ಗೆ ಭೇಟಿ ನೀಡಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಿ ಬುಕ್ ಮಾಡಿಕೊಳ್ಳಬಹುದು. ಲಾಕ್ ಡೌನ್ ನಂತ್ರ ಉಂಟಾಗುವ ಜನದಟ್ಟಣೆ ತಪ್ಪಿಸಲು ಇದೊಂದು ಉತ್ತಮ ವಿಧಾನವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...