alex Certify AirTel ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: OTT ಉಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

AirTel ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: OTT ಉಚಿತ

ಪ್ರಮುಖ ಟೆಲಿಕಾಂ ಸೇವಾ ಕಂಪನಿಯಾದ ಭಾರ್ತಿ ಏರ್‌ಟೆಲ್ ತನ್ನ 2999 ರೂ. ಯೋಜನೆಯನ್ನು ಬಳಕೆದಾರರಿಗಾಗಿ ನವೀಕರಿಸಿದೆ. ಈಗ ಈ ಯೋಜನೆಯೊಂದಿಗೆ ಪ್ರಮುಖ ಓವರ್ ದಿ ಟಾಪ್(OTT) ಪ್ರಯೋಜನಗಳನ್ನು ಉಚಿತವಾಗಿ ನೀಡುತ್ತಿದೆ.

ಇದೀಗ 2999 ರೂ. ಯೋಜನೆ ಖರೀದಿಸುವ ಏರ್‌ಟೆಲ್ ಬಳಕೆದಾರರು ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು 2GB ದೈನಂದಿನ ಡೇಟಾ ಜೊತೆಗೆ ಉಚಿತ Disney+ Hotstar ಮೊಬೈಲ್ ಚಂದಾದಾರಿಕೆಯೊಂದಿಗೆ 365 ದಿನಗಳವರೆಗೆ ಪಡೆಯುತ್ತಾರೆ. ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳೂ ಇವೆ, ಇದು ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಯ ಒಂದು ತಿಂಗಳ ಉಚಿತ ಪ್ರಯೋಗ, ವೈಂಕ್ ಮ್ಯೂಸಿಕ್, ಶಾ ಅಕಾಡೆಮಿ, 100 ರೂ. ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.

ಈ ಯೋಜನೆಯು ಹಿಂದೆ ಅದೇ ಪ್ರಯೋಜನಗಳನ್ನು ಹೊಂದಿತ್ತು; 499 ರೂ. ಮೌಲ್ಯದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ರಯೋಜನ ಮಾತ್ರ ಇರಲಿಲ್ಲ. ಪ್ರಯೋಜನಗಳಲ್ಲಿನ ಬದಲಾವಣೆಯು ಮೊಬೈಲ್ ಅಪ್ಲಿಕೇಶನ್ ಮತ್ತು ಟೆಲ್ಕೊ ವೆಬ್‌ಸೈಟ್ ಎರಡರಲ್ಲೂ ಇದೆ.

ಆದರೆ, ಈಗ ನಡೆದಿರುವ ಒಂದು ಕುತೂಹಲಕಾರಿ ಸಂಗತಿಯೆಂದರೆ, 2999 ರೂ. ಪ್ಲಾನ್ 3359 ರೂ. ಪ್ಲಾನ್ ಆಗಿ ಮಾರ್ಪಟ್ಟಿದೆ.

ಏರ್‌ಟೆಲ್‌ನಿಂದ 3359 ರೂ. ಯೋಜನೆಯು 2999 ರೂ. ಪ್ಲಾನ್‌ನಂತೆಯೇ ಅದೇ ಪ್ರಯೋಜನಗಳೊಂದಿಗೆ ಬರುತ್ತದೆ.

3359 ರೂ. ಪ್ಲಾನ್‌ನ ಪ್ರಯೋಜನಗಳು ಈಗ 2999 ರೂ.ಪ್ಲಾನ್‌ಗೆ ಹೋಲುತ್ತವೆ. ಈ ಹಿಂದೆ, ಬಳಕೆದಾರರು 2999 ರೂ. ಯೋಜನೆಯೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಲಿಲ್ಲ, ಆದರೆ ಇದು 3359 ರೂ.ಯೋಜನೆಗೆ ಇತ್ತು. ಹೀಗಾಗಿ, ಯೋಜನೆಗಳ ನಡುವೆ ವ್ಯತ್ಯಾಸವಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...