alex Certify ಗೃಹ, ವಾಹನ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್: ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ, ವಾಹನ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್: ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ

ಬೆಂಗಳೂರು: ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಗೃಹ ಸಾಲ, ಕಾರ್ ಮೇಲಿನ ಸಾಲುಗಳಿಗೆ ವಿಶೇಷ ಕೊಡುಗೆ ನೀಡಲಾಗುವುದು.

ಹಬ್ಬದ ಹಿನ್ನೆಲೆಯಲ್ಲಿ ಈ ಕೊಡುಗೆ ಘೋಷಿಸಲಾಗಿದೆ. ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿಯಲ್ಲಿ ಶೇಕಡ 0.25 ರಷ್ಟು ಕಡಿಮೆ ಮಾಡಲಾಗಿದೆ. ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ.

ಬೇರೆ ಕಡೆ ಗೃಹ ಸಾಲ ಪಡೆದವರು ಬ್ಯಾಂಕ್ ಆಫ್ ಬರೋಡಾಕ್ಕೆ ಸಾಲ ವರ್ಗಾಯಿಸಿದರೆ ಹೆಚ್ಚುವರಿ ಪ್ರೋತ್ಸಾಹ ನೀಡಲಾಗುವುದು. ಕಾರ್ ಮೇಲಿನ ಸಾಲಗಳಿಗೆ ಆಕರ್ಷಕ ಬಡ್ಡಿ ವಿಧಿಸಲಾಗುವುದು.

ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬ್ಯಾಂಕಿನ ಮುಖ್ಯಸ್ಥ ಹಾಗೂ ಅಡಮಾನ ಮತ್ತು ಇತರೆ ಆಸ್ತಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಹೆಚ್.ಟಿ. ಸೋಲಂಕಿ ತಿಳಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...