alex Certify ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ವಾರ 6 ದಿನ ಇರಲ್ಲ ಬ್ಯಾಂಕ್ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ವಾರ 6 ದಿನ ಇರಲ್ಲ ಬ್ಯಾಂಕ್ ಸೇವೆ

ನವದೆಹಲಿ: ಮುಂದಿನ ವಾರ ಬ್ಯಾಂಕ್ ಎರಡು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಮಾರ್ಚ್ 27 ರಿಂದ ಏಪ್ರಿಲ್ 3 ವರೆಗಿನ ಅವಧಿಯಲ್ಲಿ ಬ್ಯಾಂಕ್ ನೌಕರರ ಮುಷ್ಕರ ಮತ್ತು ರಜೆ ಸೇರಿದಂತೆ ಕೇವಲ ಎರಡು ದಿನಗಳು ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದ್ದು, ಬ್ಯಾಂಕಿಗೆ ಸಂಬಂಧಿಸಿದ ತಮ್ಮ ಯಾವುದೇ ವಹಿವಾಟು, ವ್ಯವಹಾರಗಳಿದ್ದಲ್ಲಿ ಮೊದಲೇ ಮುಗಿಸಿಕೊಳ್ಳುವುದು ಒಳ್ಳೆಯದು.

ಮಾರ್ಚ್ 27 ರಂದು ಭಾನುವಾರ ಎಂದಿನಂತೆ ರಜೆ ಇದೆ

ಮಾರ್ಚ್ 28 ಮತ್ತು 29 ರಂದು ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮಾರ್ಚ್ 30 ಮತ್ತು 31 ರಂದು ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿವೆ.

ಏಪ್ರಿಲ್ 1 ರಂದು ಹಣಕಾಸು ವರ್ಷ ಆರಂಭವಾಗುವುದರಿಂದ ಬ್ಯಾಂಕ್ ಸೇವೆ ಇರುವುದಿಲ್ಲ.

ಏಪ್ರಿಲ್ 2 ರಂದು ಯುಗಾದಿಗೆ ರಜೆ ಇರುತ್ತದೆ.

ಏಪ್ರಿಲ್ 3 ರಂದು ಭಾನುವಾರ ರಜೆ ಇದೆ.

ಹೀಗಾಗಿ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಎಂಟು ದಿನಗಳಲ್ಲಿ ಆರು ದಿನಗಳಿಗೆ ಬ್ಯಾಂಕಿಗೆ ರಜೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...