alex Certify ಈ ಬೈಕ್‌ ಖರೀದಿಸಬೇಕೆಂದುಕೊಂಡವರಿಗೆ ಬೆಲೆ ಏರಿಕೆ ಬಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೈಕ್‌ ಖರೀದಿಸಬೇಕೆಂದುಕೊಂಡವರಿಗೆ ಬೆಲೆ ಏರಿಕೆ ಬಿಸಿ

ಬಜಾಜ್ ಆಟೋ ಸಂಸ್ಥೆಯ ಡೋಮಿನರ್ 250 ಬೈಕ್ ನ ಬೆಲೆ 1,625 ರೂ. ಹೆಚ್ಚಳವಾಗಿದ್ದು, ಇದರಿಂದ ಬೈಕ್ ಬೆಲೆ ಈಗ 1.66 ಲಕ್ಷ ರೂ. ಆಗಿದೆ.

ಹೌದು, 2020 ರ ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಗೆ ಬಂದಾಗ 1.60 ಲಕ್ಷ ರೂ. ಇದ್ದ ಬಜಾಜ್ ಡೋಮಿನರ್ 250 ಈಗ 1.66 ಲಕ್ಷ ರೂ.ಗೆ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಷ್ಟೇ 4,090 ರೂ. ಹೆಚ್ಚಳ ಆಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಾಗಲೇ 1,625 ರೂ. ಏರಿಕೆಯಾಗಿದೆ.

ಕೆಟಿಎಂ 250 ಡ್ಯೂಕ್ ನ ಮಾದರಿಯಾಗಿಟ್ಟುಕೊಂಡು ಪರಿಚಯಿಸಿದ ಡೋಮಿನರ್ 250, 248.8 ಸಿಸಿ ಇಂಜಿನ್ ಹೊಂದಿದ್ದು, ಸಿಂಗಲ್ ಸಿಲಿಂಡರ್ ಉಳ್ಳದ್ದಾಗಿದೆ.

ಸ್ಪೀಡೋಮೀಟರ್ ಸೇರಿದಂತೆ ಡಿಜಿಜಲ್ ಉಪಕರಣಗಳನ್ನು ಅಳವಡಿಸಿದ್ದು, ಎಲ್ಇಡಿ ಬಲ್ಬ್ ಇದೆ. 13 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದ್ದು, 10.5 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುವುದಲ್ಲದೆ, ಗಂಟೆಗೆ 135 ಕಿ.ಮೀ. ವೇಗದಲ್ಲಿ ಸಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...