alex Certify ಆಪಲ್ ಐಫೋನ್ ಮೇಲೆ ಸಿಗ್ತಿದೆ 25 ಸಾವಿರದವರೆಗೆ ಡಿಸ್ಕೌಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್ ಐಫೋನ್ ಮೇಲೆ ಸಿಗ್ತಿದೆ 25 ಸಾವಿರದವರೆಗೆ ಡಿಸ್ಕೌಂಟ್

ಭಾರತದಲ್ಲಿ ಆಪಲ್ ತಮ್ಮ ಮೊದಲ ಆನ್ಲೈನ್ ಸ್ಟೋರ್ ಶುರು ಮಾಡಿದೆ. ಗ್ರಾಹಕರು ಇದ್ರ ಮೂಲಕ ಆಪಲ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ. ಗ್ರಾಹಕರಿಗೆ ಇದ್ರಿಂದ ಸಾಕಷ್ಟು ಲಾಭವಾಗ್ತಿದೆ. ಇದರಲ್ಲಿ ಆಪಲ್ ಟ್ರೇಡ್ ಇನ್ ಪ್ರೋಗ್ರಾಂ ಕೂಡ ಒಂದು.

ಆಪಲ್ ಟ್ರೇಡ್ ಇನ್ ಪ್ರೋಗ್ರಾಂ ಅಡಿಯಲ್ಲಿ,  ಹಳೆಯ ಸ್ಮಾರ್ಟ್ಫೋನ್ ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಐಫೋನ್ ಖರೀದಿಸಬಹುದು. ಕಂಪನಿಯ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡಲಾಗಿದೆ.

ಹಳೆಯ ಐಫೋನ್ ವಿನಿಮಯ ಮಾಡಿಕೊಳ್ಳುವ ಮೂಲಕ ಗ್ರಾಹಕರು 35,000 ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡುವಾಗ,  ಗರಿಷ್ಠ 23,020 ರೂಪಾಯಿಗಳ ರಿಯಾಯಿತಿ ಸಿಗುತ್ತದೆ.

ಆಪಲ್ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಐಫೋನ್ ಬೈ ಆಯ್ಕೆಗೆ ಹೋಗಬೇಕು. ಆಪಲ್ ಮಾಡಲ್ ಆಯ್ಕೆ ಮಾಡಿದ ನಂತ್ರ ಹಳೆಯ ಫೋನ್‌ನ ವಿವರಗಳನ್ನು ನಮೂದಿಸಬೇಕಾಗುತ್ತದೆ. ತಕ್ಷಣ ಕ್ರೆಡಿಟ್ ಅನ್ವಯಿಸಿ ಹೊಸ ಐಫೋನ್‌ನ ಬೆಲೆ ನೀಡಲಾಗುವುದು. ನಂತ್ರ ಸಾಮಾನ್ಯ ಶಾಪಿಂಗ್ ನಂತೆಯೇ ನೀವು ಐಫೋನ್ ಖರೀದಿ ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...