alex Certify ‘ಆಪಲ್’ ಗ್ರಾಹಕರಿಗೆ ಭರ್ಜರಿ ಸುದ್ದಿ: ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್, ಐಪ್ಯಾಡ್, ವಾಚ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಪಲ್’ ಗ್ರಾಹಕರಿಗೆ ಭರ್ಜರಿ ಸುದ್ದಿ: ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್, ಐಪ್ಯಾಡ್, ವಾಚ್ ಬಿಡುಗಡೆ

ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಲಾಂಚ್ ಈವೆಂಟ್‌ನಲ್ಲಿ ಆಪಲ್ ವಾಚ್ ಸರಣಿ 7 ಮತ್ತು ಏರ್‌ಪಾಡ್ಸ್ 3 ಜೊತೆಗೆ ಆಪಲ್ ಐಫೋನ್ 13 ಇಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆಪಲ್ ಈವೆಂಟ್ ಇಂದು ರಾತ್ರಿ ಆರಂಭವಾಗಿದ್ದು, ಈಗಾಗಲೇ 9 ನೇ ಜನರೇಶನ್ ಐಪ್ಯಾಡ್ ಬಿಡುಗಡೆಯಾಗಿದೆ. ಹೊಸ ಎಂಟ್ರಿ ಲೆವೆಲ್ ಆಪಲ್ ಟ್ಯಾಬ್ಲೆಟ್ A13 ಬಯೋನಿಕ್ SoC ಬೆಲೆ 329 ಡಾಲರ್ ಆಗಿದ್ದು, ಇದು 64GB ಸ್ಟೋರೇಜ್ ಹೊಂದಿದೆ. ಸೆಂಟರ್ ಸ್ಟೇಜ್‌ನೊಂದಿಗೆ 12.2 ಎಮ್‌ಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ಇದರ ಬೆಲೆ ಭಾರತದಲ್ಲಿ ಎಷ್ಟಿರಲಿದೆ ಎಂಬುದರ ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ.

ಐಪ್ಯಾಡ್ ಮಿನಿ 8.3 ಇಂಚಿನ ಡಿಸ್ ಪ್ಲೇಯೊಂದಿಗೆ ಹೊಸ ವಿನ್ಯಾಸ ಹೊಂದಿದೆ. ಇದು 2x faster machine ಹೊಂದಿದೆ. ಆಪಲ್ ವಾಚ್ ಸೀರೀಸ್ 7 ಕೂಡ ಬಿಡುಗಡೆಯಾಗಲಿದೆ. ದೊಡ್ಡ ಡಿಸ್‌ಪ್ಲೇ, IP6X durability ರೇಟಿಂಗ್ ಹೊಂದಿರುವ ಇದಕ್ಕೆ 399 ಡಾಲರ್ ನಿಗದಿಪಡಿಸಲಾಗಿದೆ.

ಐಫೋನ್ 13 ಸಿರೀಸ್ ಕೂಡ ಗಮನಸೆಳೆಯುವಂತಿದ್ದು, ಇದರಲ್ಲಿ A15 ಬಯೋನಿಕ್, ಸೆನ್ಸರ್ ಶಿಫ್ಟ್ OIS ಕ್ಯಾಮೆರಾಗಳು ಮತ್ತು ಸಿನಿಮಾ ಮೋಡ್ ವೀಡಿಯೋಗ್ರಫಿ ಇದೆ.

ಸಾಮಾನ್ಯ ಐಫೋನ್ 13 ಮತ್ತು ಐಫೋನ್ 13 ಮಿನಿ ಹಿಂಭಾಗದಲ್ಲಿ ಒಂದೇ ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳು ಟ್ರಿಪಲ್ ಕ್ಯಾಮೆರಾಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. ಹೊಸ ಫೋನ್‌ಗಳ ಡಮ್ಮಿ ಯೂನಿಟ್‌ಗಳು ದೊಡ್ಡ ಸೆನ್ಸಾರ್ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ರೆಗ್ಯುಲರ್ ಮಾಡೆಲ್‌ಗಳಲ್ಲಿ ಡಯಾಮಿನಲ್ ಪ್ಲೇಸ್‌ಮೆಂಟ್ ತೋರಿಸುತ್ತವೆ. ಕ್ಯಾಮೆರಾ ಮಾಡ್ಯೂಲ್ ಲೇಸರ್ ಸೆನ್ಸರ್ ಮತ್ತು ಎಲ್ಇಡಿ ಫ್ಲ್ಯಾಷ್ ಒಳಗೊಂಡಿದೆ ಎಂದು ಹೇಳಲಾಗಿದೆ.

ಮತ್ತೊಂದೆಡೆ, ಐಫೋನ್ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಈಗಿರುವ ಐಫೋನ್ 12 ಪ್ರೊ ಮಾಡೆಲ್ ಗಳಂತೆಯೇ ಲಿಡಾರ್ ಸೆನ್ಸರ್ ಅನ್ನು ಒಳಗೊಂಡಿರಬಹುದು. ಪ್ರೊ ಮಾಡೆಲ್ ಗಳು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ, ಇದು ಈಗಾಗಲೇ ಐಪ್ಯಾಡ್ ಪ್ರೊ(2020 ಮತ್ತು 2021) ಮಾಡೆಲ್ ಗಳಲ್ಲಿ ‘ಪ್ರೊಮೋಷನ್ ಡಿಸ್‌ಪ್ಲೇ’ ಹೊಂದಿದೆ. ಇದಲ್ಲದೇ, ಐಫೋನ್ 13 ಸರಣಿಯು ಹೊಸ ಫೇಸ್ ಅನ್ಲಾಕ್ ಟೆಕ್ ಅನ್ನು ಒಳಗೊಂಡಿದ್ದು, ಅದು ಮಾಸ್ಕ್ ಅಥವಾ ಕನ್ನಡಕ ಧರಿಸಿದಾಗಲೂ ಕೆಲಸ ಮಾಡುತ್ತದೆ.

ಆಪಲ್ ವಾಚ್ ಸೀರೀಸ್ 7 ಮರುವಿನ್ಯಾಸದೊಂದಿಗೆ ಬರುತ್ತದೆ. ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಈ ವರ್ಷದ ಆರಂಭದಲ್ಲಿ ಅದೇ ರೀತಿ ಭವಿಷ್ಯ ನುಡಿದಿದ್ದರು. ಇದಲ್ಲದೆ, ಆಪಲ್ ವಾಚ್ ರಕ್ತದೊತ್ತಡ ಮಾನಿಟರ್, ರಕ್ತದ ಗ್ಲೂಕೋಸ್ ಮಾನಿಟರ್, ಆಲ್ಕೋಹಾಲ್ ಮಟ್ಟ ಮತ್ತು ಹೆಚ್ಚಿನ ಇತರ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...