alex Certify ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ RBI ನಿಂದ ವಿಶೇಷ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ RBI ನಿಂದ ವಿಶೇಷ ಮಾರ್ಗಸೂಚಿ

ಭಾರತೀಯ ರಿಸರ್ವ್ ಬ್ಯಾಂಕ್​ ಗುರುವಾರ ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ ಪ್ರಮುಖ ಮಾರ್ಗಸೂಚಿಗಳನ್ನ ಹೊರಡಿಸಿದೆ. 2020-21ನೇ ಸಾಲಿನಲ್ಲಿ ಏಜೆನ್ಸಿ ಬ್ಯಾಂಕ್​ ನಡೆಸುವ ಎಲ್ಲಾ ಸರ್ಕಾರಿ ವ್ಯವಹಾರಗಳು ಅದೇ ವರ್ಷದ ಒಳಗಾಗಿ ಮುಗಿಯಬೇಕು.  ಸರ್ಕಾರಿ ವಹಿವಾಟುಗಳ ಮೇಲೆ ನಿಗಾ ಇಡುವ ಸಲುವಾಗಿ ಭಾರತೀಯ ರಿಸರ್ವ್​ ಬ್ಯಾಂಕ್​ ಈ ಮಾರ್ಗಸೂಚಿ ಹೊರಡಿಸಿದೆ.

1. ಎಲ್ಲಾ ಏಜೆನ್ಸಿ ಬ್ಯಾಂಕ್​ಗಳು 31 ಮಾರ್ಚ್​ 2021ರಂದು ಸಾಮಾನ್ಯ ಕೆಲಸದ ಅವಧಿಯಂತೆ ಸರ್ಕಾರಿ ವ್ಯವಹಾರ ಸಂಬಂಧ ಖಾತೆಯ ಮಾಹಿತಿಯನ್ನ ನಿರ್ದಿಷ್ಟ ಶಾಖೆಯಲ್ಲಿ ಮುಕ್ತವಾಗಿಡಬೇಕು.

2. ರಾಷ್ಟ್ರೀಯ ಎಲೆಕ್ಟ್ರಾನಿಕ್​​ ಫಂಡ್​ ಟ್ರಾನ್ಸಫರ್​​​ ಹಾಗೂ ರಿಯಲ್​ ಟೈಂ ಗ್ರಾಸ್​ ಸೆಟಲ್​ಮೆಂಟ್​​ನಿಂದ ನಡೆದ ವ್ಯವಹಾರಗಳು  ಮಾರ್ಚ್​ 30, 2021ರಂದು 24 ಗಂಟೆಯವರೆಗೆ ಜಾರಿಯಲ್ಲಿರಲಿದೆ.

ಸಲೂನ್ ನಡೆಸುವ ಈ ವ್ಯಕ್ತಿ ಬಳಿಯಿದೆ 378 ಕಾರ್…..!

3. ಸರ್ಕಾರದಿಂದ ಚೆಕ್​ಗಳ ಸಂಗ್ರಹಕ್ಕಾಗಿ ವಿಶೇಷ ಕ್ಲಿಯರಿಂಗ್​ ಅವಧಿಯನ್ನ ನಿಗದಿ ಮಾಡಲಾಗುತ್ತೆ.  ಇದಕ್ಕಾಗಿ ಡಿಪಿಎಸ್​ಎಸ್​ ಹಾಗೂ ಆರ್​ಬಿಐ ವಿಶೇಷ ನಿರ್ದೇಶನ ಜಾರಿ ಮಾಡಲಿದೆ.

4. ಆರ್​ಬಿಐಗೆ  ಜಿಎಸ್​ಟಿ , ಇ ರಿಸಿಪ್ಟ್​ಗಳು ಸೇರಿದಂತೆ ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳ ವ್ಯವಹಾರಗಳ ವಿಚಾರದಲ್ಲಿ 31 ಮಾರ್ಚ್​ 2021ರ ರಿಪೋರ್ಟಿಂಗ್​  ವಿಂಡೋ  1 ಏಪ್ರಿಲ್​ 2021ರಂದು 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...