ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ ಪ್ರಮುಖ ಮಾರ್ಗಸೂಚಿಗಳನ್ನ ಹೊರಡಿಸಿದೆ. 2020-21ನೇ ಸಾಲಿನಲ್ಲಿ ಏಜೆನ್ಸಿ ಬ್ಯಾಂಕ್ ನಡೆಸುವ ಎಲ್ಲಾ ಸರ್ಕಾರಿ ವ್ಯವಹಾರಗಳು ಅದೇ ವರ್ಷದ ಒಳಗಾಗಿ ಮುಗಿಯಬೇಕು. ಸರ್ಕಾರಿ ವಹಿವಾಟುಗಳ ಮೇಲೆ ನಿಗಾ ಇಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗಸೂಚಿ ಹೊರಡಿಸಿದೆ.
1. ಎಲ್ಲಾ ಏಜೆನ್ಸಿ ಬ್ಯಾಂಕ್ಗಳು 31 ಮಾರ್ಚ್ 2021ರಂದು ಸಾಮಾನ್ಯ ಕೆಲಸದ ಅವಧಿಯಂತೆ ಸರ್ಕಾರಿ ವ್ಯವಹಾರ ಸಂಬಂಧ ಖಾತೆಯ ಮಾಹಿತಿಯನ್ನ ನಿರ್ದಿಷ್ಟ ಶಾಖೆಯಲ್ಲಿ ಮುಕ್ತವಾಗಿಡಬೇಕು.
2. ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಹಾಗೂ ರಿಯಲ್ ಟೈಂ ಗ್ರಾಸ್ ಸೆಟಲ್ಮೆಂಟ್ನಿಂದ ನಡೆದ ವ್ಯವಹಾರಗಳು ಮಾರ್ಚ್ 30, 2021ರಂದು 24 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಸಲೂನ್ ನಡೆಸುವ ಈ ವ್ಯಕ್ತಿ ಬಳಿಯಿದೆ 378 ಕಾರ್…..!
3. ಸರ್ಕಾರದಿಂದ ಚೆಕ್ಗಳ ಸಂಗ್ರಹಕ್ಕಾಗಿ ವಿಶೇಷ ಕ್ಲಿಯರಿಂಗ್ ಅವಧಿಯನ್ನ ನಿಗದಿ ಮಾಡಲಾಗುತ್ತೆ. ಇದಕ್ಕಾಗಿ ಡಿಪಿಎಸ್ಎಸ್ ಹಾಗೂ ಆರ್ಬಿಐ ವಿಶೇಷ ನಿರ್ದೇಶನ ಜಾರಿ ಮಾಡಲಿದೆ.
4. ಆರ್ಬಿಐಗೆ ಜಿಎಸ್ಟಿ , ಇ ರಿಸಿಪ್ಟ್ಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವ್ಯವಹಾರಗಳ ವಿಚಾರದಲ್ಲಿ 31 ಮಾರ್ಚ್ 2021ರ ರಿಪೋರ್ಟಿಂಗ್ ವಿಂಡೋ 1 ಏಪ್ರಿಲ್ 2021ರಂದು 12 ಗಂಟೆಗಳವರೆಗೆ ವಿಸ್ತರಿಸಲಾಗಿದೆ.