alex Certify ವಿಚಿತ್ರ ವಾಹನದ ವಿಡಿಯೋ ಶೇರ್​ ಮಾಡಿ ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ಆನಂದ್​ ಮಹೀಂದ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ವಾಹನದ ವಿಡಿಯೋ ಶೇರ್​ ಮಾಡಿ ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ಆನಂದ್​ ಮಹೀಂದ್ರಾ..!

ಭಾರತದ ಪ್ರತಿಷ್ಠಿತ ಉದ್ಯಮಿ ಆನಂದ್​ ಮಹೀಂದ್ರಾರನ್ನ ವಿಶ್ವದ ಯಶಸ್ವಿ ವ್ಯಕ್ತಿಗಳ ಸಾಲಿನಲ್ಲಿ ನೋಡಲಾಗುತ್ತೆ.  ಉದ್ಯಮದಲ್ಲಿ ಸಾಕಷ್ಟು ಯಶಸ್ಸನ್ನ ಪಡೆಯೋದ್ರ ಮೂಲಕ ಸುದ್ದಿಯಾಗೋದ್ರ ಜೊತೆ ಜೊತೆಗೆ ಆನಂದ ಮಹೀಂದ್ರಾ ಸೋಶಿಯಲ್​ ಮೀಡಿಯಾದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡ್ತಾನೇ ಇರ್ತಾರೆ.

ಅವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡುವ ಎಲ್ಲಾ ವಿಡಿಯೋಗಳು ಟ್ವೀಟಿಗರನ್ನ ರಂಜಿಸುವಲ್ಲಿ ಯಶಸ್ವಿಯಾಗುತ್ತೆ. ಇದೇ ಕಾರಣಕ್ಕೆ ಆನಂದ್ ಮಹೀಂದ್ರಾ ಟ್ವಿಟರ್​ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

ಆನಂದ್​ ಮಹೀಂದ್ರಾ ಇದೀಗ ವಾಹನವೊಂದರ ವಿಡಿಯೋ ಶೇರ್​ ಮಾಡಿದ್ದು ಈ ಮೂಲಕ 1972ರ  ಕ್ಲಾಸಿಕ್​ ಸಿನೆಮಾ ವಿಕ್ಟೋರಿಯಾ ನಂಬರ್​ – 203 ಹೆಸರನ್ನ ಸೂಚಿಸಿದ್ದಾರೆ. ಆನಂದ್​ ಮಹೀಂದ್ರಾ ಈ ಟ್ವೀಟ್​ ಮಾಡೋದ್ರ ಹಿಂದೆ ಒಂದು ಕಾರಣವಿದೆ. ಈ ಟಾಂಗಾ ಕುದುರೆ ಇಲ್ಲದೇ ಚಲಿಸುತ್ತಿದೆ. ಈ ವಾಹನವನ್ನ ನೋಡಿದ ಬಳಿಕ ನೀವೂ ಗೊಂದಲಕ್ಕೆ ಒಳಗಾಗಿರಬಹುದು. ಈ ವಾಹನ ಕುದುರೆಯ ಬದಲು ಬ್ಯಾಟರಿಯ ಸಹಾಯದಿಂದ ಓಡುತ್ತಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 38 ಸಾವಿರಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...